ಕುಸಿಯುತ್ತಿರುವ ಕಾಂಗ್ರೆಸ್, ಆರ್ ಜೆಡಿಗೆ ಹಿನ್ನಡೆ: NDA 195 ಕ್ಷೇತ್ರಗಳ ಭಾರೀ ಮುನ್ನಡೆ

ಪಾಟ್ನಾ,ನವೆಂಬರ್,14,2025 (www.justkannada.in): ಬಹುನಿರೀಕ್ಷಿತಾ ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದು ಬಿಜೆಪಿ, ಜೆಡಿಯು ನೇತೃತ್ವದ ಎನ್ ಡಿಎ 195 ಕ್ಷೇತ್ರಗಳ ಭರ್ಜರಿ ಮುನ್ನಡೆ ಸಾಧಿಸಿದೆ.

ಕಾಂಗ್ರೆಸ್, ಆರ್ ಜೆಡಿ ನೇತೃತ್ವದ ಮಹಾಘಟಬಂದನ್ ಗೆ ಭಾರಿ ಹಿನ್ನೆಡೆಯಾಗಿದ್ದು 44 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ.  ಪಕ್ಷವಾರು ನೋಡುವುದಾದರೇ ಎನ್ ಡಿಎ ಕೂಟದಲ್ಲಿ ಬಿಜೆಪಿ 83, ಜೆಡಿಯು 83, ಎಲ್ ಜೆಪಿ 22, ಹೆಎಎಂ 4 ಆರ್ ಎಲ್ ಎಂ 4 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.

ಮಹಾಘಟಬಂದನ್ ನಲ್ಲಿ ಆರ್ ಜೆಡಿ 33, ಕಾಂಗ್ರೆಸ್ 6 , ಲೆಫ್ಟ್ 7 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು ಈ ಮೂಲಕ  ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 6ನೇ ಸ್ಥಾನಕ್ಕೆ ಕುಸಿದಿದೆ.

Key words:  Bihar, Assembly, Election, Results, NDA, Congress