ಬಿಗ್ ಬಾಸ್ ವಾಸುಕಿ ವೈಭವ್ ಮೊದಲ ಫೈನಲಿಸ್ಟ್ !

ಬೆಂಗಳೂರು, ಜನವರಿ 2, 2019 (www.justkannada.in): ಕನ್ನಡ ಬಿಗ್ ಬಾಸ್’ನ ಈ ಸೀಸನ್ ನಲ್ಲಿ ವಾಸುಕಿ ವೈಭವ್ ಮೊದಲ ಫೈನಲಿಸ್ಟ್ ಆಗಿ ಹೊರಹೊಮ್ಮಿದ್ದಾರೆ.

ಉಳಿದಂತೆ ಶೈನ್ ಶೆಟ್ಟಿ, ಭೂಮಿ ಶೆಟ್ಟಿ, ಪ್ರಿಯಾಂಕ, ದೀಪಿಕಾ ದಾಸ್ ತಲಾ ಒಂದೊಂದು ಪದಕ ಗೆದ್ದಿದ್ದರು. ಆದರೆ ಹರೀಶ್ ರಾಜ್ ಮತ್ತು ಕುರಿ ಪ್ರತಾಪ್ ಗೆ ಒಂದೇ ಒಂದು ಪದಕ ಗೆಲ್ಲಲು ಸಾಧ‍್ಯವಾಗಿರಲಿಲ್ಲ. ಹೀಗಾಗಿ ಇವರೆಲ್ಲರೂ ಈ ವಾರ ನಾಮಿನೇಟ್ ಆಗಿದ್ದಾರೆ.

ಶೈನ್ ಶೆಟ್ಟಿ ಬಿಗ್ ಬಾಸ್ ಗೆಲ್ಲಬಹುದು ಎಂದು ವೀಕ್ಷಕರು ಊಹೆ ಮಾಡುತ್ತಿದ್ದರೂ ಈ ವಾರದ ಟಾಸ್ಕ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡದೇ ನೇರವಾಗಿ ಫೈನಲ್ ಗೆ ಆಯ್ಕೆಯಾಗುವ ಅವಕಾಶ ಕಳೆದುಕೊಂಡರು.