ಈ ವಾರಾಂತ್ಯದಿಂದ ‘ಬಿಗ್ ಬಾಸ್’ ಮನೆ ರಂಪಾಟ ನೋಡಲು ರೆಡಿಯಾಗಿ !

ಬೆಂಗಳೂರು, ಅಕ್ಟೋಬರ್ 10, 2019 (www.justkannada.in): ಬಿಗ್ ಬಾಸ್ ಕನ್ನಡ 7 ಆವೃತ್ತಿ ಇದೇ ಅ.13ರಿಂದ ಆರಂಭವಾಗಲಿದೆ.

ಸತತ ಏಳನೇ ಬಾರಿಗೆ ಬಿಗ್ಬಾಸ್ ಸಾರಥ್ಯ ವಹಿಸಿರುವ ನಟ ಕಿಚ್ಚ ಸುದೀಪ್ ಈ ಬಾರಿಯ ಪ್ರೋಮೋಗಳಲ್ಲಿಯೂ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.

ಪ್ರೋಮೋ ಕೊನೆಯಲ್ಲಿ ಅಕ್ಟೋಬರ್ 13 ರಂದು ಸಂಜೆ 6 ಗಂಟೆ ಹಾಗೂ ಪ್ರತಿ ರಾತ್ರಿ 9ಗಂಟೆಗೆ ಎಂಬ ವೇಳಾಪಟ್ಟಿ ನೀಡಲಾಗಿದೆ. ಈ ಬಾರಿಯೂ ಕಲರ್ಸ್ ಕನ್ನಡ ವಾಹಿನಿಯಲ್ಲೇ ಈ ರಿಯಾಲಿಟಿ ಶೋ ಪ್ರಸಾರವಾಗಲಿದೆ.