ಸ್ನೇಹಿತ ಸೃಜನ್ ಚಿತ್ರಕ್ಕೆ ಸಾಥ್ ನೀಡಿದ ದರ್ಶನ್ !

ಬೆಂಗಳೂರು, ಅಕ್ಟೋಬರ್ 10, 2019 (www.justkannada.in):
ಸೃಜನ್ ಲೋಕೇಶ್ ಅಭಿನಯದ ‘ಎಲ್ಲಿದ್ದೆ ಇಲ್ಲಿತನಕ’ ಚಿತ್ರ ಈ ತಿಂಗಳ 11ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳುತ್ತಿದೆ.

ಇದೀಗ ಸೃಜನ್ ಆಪ್ತ ಸ್ನೇಹಿತ ಡಿ ಬಾಸ್ ದರ್ಶನ್ ‘ಎಲ್ಲಿದ್ದೆ ಇಲ್ಲಿ ತನಕ’ ಚಿತ್ರತಂಡಕ್ಕೆ ಶುಭಕೋರಿದ್ದಾರೆ.

‘ನಮ್ಮ ಲೋಕೇಶ್ ಪ್ರೊಡಕ್ಷನ್ ಇಂದ ಮೂಡಿಬಂದಿರುವ ‘ಎಲ್ಲಿದ್ದೆ ಇಲ್ಲಿ ತನಕ’ ನಾಳೆ ಬಿಡುಗಡೆಯಾಗುತ್ತಿದೆ. ಸೃಜನ್ ಹಾಗೂ ಚಿತ್ರತಂಡಕ್ಕೆ ಶುಭವಾಗಲಿ. ಚಿತ್ರಮಂದಿರದಲ್ಲಿ ಚಿತ್ರವನ್ನು ನೋಡಿ ಆಶೀರ್ವದಿಸಿ’ ಎಂದು ಟ್ವಿಟ್ಟರ್’ನಲ್ಲಿ ಬರೆದುಕೊಂಡಿದ್ದಾರೆ