ಬ್ರಿಮ್ಸ್ ಆಸ್ಪತ್ರೆಯೊಳಗೆ ಎರಡು ಗುಂಪುಗಳ ನಡುವೆ ಮಾರಾಮಾರಿ: ‘ಕೈ’ ಮುಖಂಡ ಮತ್ತು ಮಕ್ಕಳಿಬ್ಬರ ಮೇಲೆ ಹಲ್ಲೆ.

ಬೀದರ್,ಮಾರ್ಚ್,24,2022(www.justkannada.in):  ಬೀದರ್ ನ ಬ್ರಿಮ್ಸ್ ಆಸ್ಪತ್ರೆಯೊಳಗೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ನಾಲ್ವರು ಗಾಯಗೊಂಡು ಓರ್ವನ ಸ್ಥಿತಿ ಗಂಭೀರವಾಗಿರುವ ಘಟನೆ ಇಂದು ನಡೆದಿದೆ.

ಕಾಂಗ್ರೆಸ್ ಮುಖಂಡ ಫಿರೋಜ್ ಖಾನ್ ಮತ್ತು ರೌಫ್ ಇಬ್ಬರ ಬೆಂಬಲಿಗರ ಗುಂಪು ನಡುವೆ ಮಾರಾಮಾರಿ ನಡೆದಿದೆ. ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಂಗ್ರೆಸ್ ಮುಖಂಡ ಫಿರೋಜ್ ಖಾನ್ ಮೇಲೆ ರೌಫ್ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಫಿರೋಜ್ ಖಾನ್ ಮತ್ತು ಇಬ್ಬರು ಮಕ್ಕಳ ಮೇಲೆ ಹಲ್ಲೆಯಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮಾರಾಮಾರಿ ವೇಳೆ ರೌಫ್ ಗೂ ಗಾಯಗಳಾಗಿದ್ದು ಹೈದರಾಬಾದ್ ಆಸ್ಪತ್ರೆಗೆ ರವಾನಿಸಲಾಗಿದೆ ಎನ್ನಲಾಗಿದೆ. ಇನ್ನು ಹಳೆ ವೈಷಮ್ಯ ಹಿನ್ನೆಲೆ ಹಲ್ಲೆ ನಡೆದಿದೆ ಎನ್ನಲಾಗಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

Key words: bidar- Brims –Hospital-assult