ಅಪಘಾತದಲ್ಲಿ ‘ಕಚ್ಚಾ ಬಾದಾಮ್‌’ ಖ್ಯಾತಿಯ ಭುಬನ್ ಭಡ್ಯಾಕರ್: ಆಸ್ಪತ್ರೆಗೆ ದಾಖಲು

ಬೆಂಗಳೂರು, ಮಾರ್ಚ್ 02, 2021 (www.justkannada.in): ‘ಕಚ್ಚಾ ಬಾದಾಮ್‌’ ಹಾಡಿನ ಗಾಯಕ ಭುಬನ್ ಭಡ್ಯಾಕರ್ ಅವರು ಕಾರು ಅಪಘಾತದಲ್ಲಿ ಗಾಯಗೊಂಡಿದ್ದಾರೆ.

ಸದ್ಯ ಅವರು ಪಶ್ಚಿಮ ಬಂಗಾಳದ ಬಿರ್ಭುಮ್‌ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭುಬನ್ ಭಡ್ಯಾಕರ್, ಇತ್ತೀಚೆಗೆ ಖರೀದಿಸಿದ ಕಾರನ್ನು ಓಡಿಸಲು ಕಲಿಯುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಮುಖ ಮತ್ತು ಎದೆ ಭಾಗಕ್ಕೆ ಗಾಯಗಳಾಗಿವೆ.

ಬೀದಿ ಬದಿಯಲ್ಲಿ ಕಡಲೆಕಾಯಿ ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದ ಭುಬನ್ ಭಡ್ಯಾಕರ್ ಅವರ ‘ಕಚ್ಚಾ ಬಾದಾಮ್‌’ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಕಡಲೇ ಕಾಯಿ ಮಾರಾಟ ಮಾಡುವ ಸಲುವಾಗಿ ಅವರೇ ಈ ಹಾಡು ಬರೆದು ಹಾಡಿದ್ದರು. ಬಂಗಾಳಿಯಲ್ಲಿ ‘ಕಚ್ಚಾ ಬಾದಾಮ್‌’ ಎಂದರೆ ಹಸಿ ಕಡಲೆಕಾಯಿ.