Sunday, August 23, 2026

BDA Apartments

Home Cinema ಇಂದು ಅಮೆಜಾನ್ ಪ್ರೈಂನಲ್ಲಿ ‘ಭೀಮಸೇನ ನಳಮಹಾರಾಜ’ ಬಿಡುಗಡೆ

ಇಂದು ಅಮೆಜಾನ್ ಪ್ರೈಂನಲ್ಲಿ ‘ಭೀಮಸೇನ ನಳಮಹಾರಾಜ’ ಬಿಡುಗಡೆ

ಬೆಂಗಳೂರು, 29 ಅಕ್ಟೋಬರ್ 2020 (www.justkannada.in): ಪುಷ್ಕರ ಮಲ್ಲಿಕಾರ್ಜುನಯ್ಯ ನಿರ್ಮಾಣದ ‘ಭೀಮಸೇನ ನಳಮಹಾರಾಜ’ ಸಿನಿಮಾ ಇಂದು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಯಾಗುತ್ತಿದೆ.

ಹೌದು. ಆನ್ ಲೈನ್ ಫ್ಲಾಟ್ ಫಾರಂನಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರಗಳ ಸಂಖ್ಯೆ ಸ್ಯಾಂಡಲ್ ವುಡ್ ನಲ್ಲಿಯೂ ಹೆಚ್ಚಾಗುತ್ತಿದೆ.

ಇದಕ್ಕೆ ಸೇರ್ಪಡೆ ಎಂಬಂತೆ ಪುಷ್ಕರ ಮಲ್ಲಿಕಾರ್ಜುನಯ್ಯ ನಿರ್ಮಾಣದ ‘ಭೀಮಸೇನ ನಳಮಹಾರಾಜ’ ಬಿಡುಗಡೆಯಾಗುತ್ತಿದೆ. ಚಿತ್ರವನ್ನು ಕಾರ್ತಿಕ್ ಸರಗೂರು ನಿರ್ದೇಶಿಸಿದ್ದಾರೆ. ಹೆಸರೇ ಹೇಳುವಂತೆ ಇದು ಅಡುಗೆಯವನೊಬ್ಬ ಕತೆ, ವ್ಯಥೆ ಇರುವ ಸಿನಿಮಾ.

ಅರವಿಂದ್ ಅಯ್ಯರ್, ಪ್ರಿಯಾಂಕ ತಿಮ್ಮೇಶ್ ಪ್ರಧಾನ ಪಾತ್ರದಲ್ಲಿದ್ದಾರೆ. ಈಗಾಗಲೇ ಟ್ರೈಲರ್, ಹಾಡು ಬಿಡುಗಡೆಯಾಗಿದ್ದು, ಸಾಕಷ್ಟು ನಿರೀಕ್ಷೆ ಮೂಡಿದೆ. ಇಂದಿನಿಂದ ಇದು ಅಮೆಝೋನ್ ಪ್ರೈಮ್ ಆಪ್ ನಲ್ಲಿ ಲಭ್ಯವಿದೆ.