Thursday, August 13, 2026

BDA Apartments

Home Front Page ರೈತರು ಕರೆ ನೀಡಿರುವ ಭಾರತ್ ಬಂದ್ ಯಶಸ್ವಿಯಾಗಲ್ಲ : ಸಿಎಂ ಬಿ.ಎಸ್.ಯಡಿಯೂರಪ್ಪ

ರೈತರು ಕರೆ ನೀಡಿರುವ ಭಾರತ್ ಬಂದ್ ಯಶಸ್ವಿಯಾಗಲ್ಲ : ಸಿಎಂ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು,ಡಿಸೆಂಬರ್,08,2020(www.justkannada.in) : ನಮ್ಮದು ರೈತರ ಪರವಾಗಿರುವ ಸರ್ಕಾರ, ರೈತರ ಹಿತದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ. ರೈತರು ಕರೆ ನೀಡಿರುವ ಭಾರತ್ ಬಂದ್ ಯಶಸ್ವಿಯಾಗಲ್ಲ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.logo-justkannada-mysore

ಕೇಂದ್ರ ಸರ್ಕಾರದ ಕೃಷಿ ಮಸೂದೆ ಕಾಯ್ದೆಗಳನ್ನು ವಿರೋಧಿಸಿ ಇಂದು ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಬಗ್ಗೆ ವಿಧಾನಸೌಧದಲ್ಲಿ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ರೈತರಿಗೆ ಧಕ್ಕೆ ಆಗುವ ಕೆಲಸ ಪ್ರಧಾನಿ ಮೋದಿ ಎಂದೂ ಮಾಡಿಲ್ಲ, ಭಾರತ್ ಬಂದ್ ಯಶಸ್ವಿಯಾಗಲ್ಲ. ರಾಜ್ಯದ ಜನ, ಬೆಂಗಳೂರಿನ ಜನ ತೆಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಪ್ರಧಾನಿ ಮೋದಿ ಹಾಗೂ ನಮ್ಮ ಸರ್ಕಾರ ರೈತರ ಪರವಾಗಿದ್ದೇವೆ. ಪ್ರಧಾನಿ ಯಾವತ್ತೂ ಕೂಡ ರೈತ ವಿರುದ್ಧ ಹೋಗಿಲ್ಲ. ಇದು ರಾಜಕೀಯ ಪ್ರೇರಿತ ಬಂದ್ ಎಂದು ಹೇಳಿದರು.

Bharat-band-called-farmers-not-successful-CM B.S.Yeddyurappa

key words : Bharat-band-called-farmers-not-successful-CM B.S.Yeddyurappa