ಕೃಷಿ ತಿದ್ಧುಪಡಿ ಕಾಯ್ದೆ ವಿರೋಧಿಸಿ ರಾಜ್ಯಾದ್ಯಂತ ಹಲವೆಡೆ ರಸ್ತೆ ತಡೆದು ಹೋರಾಟ: ಪ್ರತಿಭಟನಾಕಾರರು ಪೊಲೀಸರ ವಶಕ್ಕೆ

ಬೆಂಗಳೂರು,ಸೆಪ್ಟಂಬರ್,27,2021(www.justkannada.in): ಕೇಂದ್ರ ಸರ್ಕಾರದ  ಕೃಷಿ ತಿದ್ಧುಪಡಿ ಕಾಯ್ದೆ ವಿರೋಧಿಸಿ ಇಂದು ಭಾರತ್ ಬಂದ್ ಗೆ ಕರೆ ನೀಡಲಾಗಿದ್ದು, ದೇಶಾದ್ಯಂತ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ರಾಜ್ಯದಲ್ಲೂ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ಕಾವು ಹೆಚ್ಚಾಗಿದ್ದು, ವಿವಿಧೆಡೆ ಪ್ರತಿಭಟನೆಗೆ ಮುಂದಾದ ಪ್ರತಿಭಟನಾಕಾರರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರೈತರ ಆಕ್ರೋಶ ಹೆಚ್ಚಾಗಿದ್ದು ಈ ನಡುವೆ ಪ್ರತಿಭಟನೆಗೂ ಮುನ್ನವೇ  ಮೌರ್ಯ ಸರ್ಕಲ್ ನಲ್ಲಿ ರೈತ ಮುಖಂಡ ಕುರುಬೂರು ಶಾಂತಕುಮಾರ್ ಅವರನ್ನ ಪೊಲೀಸರು ವಶಕ್ಕೆ ಪಡೆದರು.

ಇನ್ನು ರಾಜ್ಯದ್ಯಂತ ಭಾರತ್ ಬಂದ್ ಬಿಸಿ ಜನಸಾಮನ್ಯರಿಗೆ ತಟ್ಟಿಲ್ಲ.  ಬೆಂಗಳೂರು ಸೇರಿ ರಾಜ್ಯದಲ್ಲಿ ಸರ್ಕಾರಿ ಖಾಸಗಿ ಬಸ್​ಗಳ ಓಡಾಟ ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಇನ್ನು ಮಾರುಕಟ್ಟೆ, ಹೋಟೆಲ್, ಅಂಗಡಿಗಳು ಓಪನ್ ಆಗಿವೆ. ಜನರ ಓಡಾಟವು ನಿರಾತಂಕವಾಗಿದೆ.

ಶಾಲಾ-ಕಾಲೇಜುಗಳ ಚಟುವಟಿಕೆಗಳು, ಹೋಟೆಲ್‌ಗಳು ಕೂಡ ಎಂದಿನಂತೆ ನಡೆಯುತ್ತಿದೆ. ಬಂದ್ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಅಕ್ಕಮಹಾದೇವಿ ವಿವಿ ಯ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಸಂಯುಕ್ತ ರೈತ ಒಕ್ಕೂಟದಿಂದ ಕರೆಕೊಟ್ಟಿರುವ ಬಂದ್ ಕೋಟೆನಾಡು‌ ಚಿತ್ರದುರ್ಗದಲ್ಲಿ ಪ್ರತಿಭಟನೆ ಮೂಲಕ ಆರಂಭವಾಗಿದೆ. ನಗರದ ಗಾಂಧಿ ವೃತ್ತದಲ್ಲಿ ವಿವಿಧ ರೈತ,‌ ಕಾರ್ಮಿಕ ಮತ್ತಿತರೆ ಸಂಘಟನೆಗಳ ಮುಖಂಡರು‌ ಆಗಮಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ‌ ನಡುವೆ ರೈತ ಮುಖಂಡ ಲಿಂಗಾವರಹಟ್ಟಿ ಲಕ್ಷ್ಮೀಕಾಂತ್ ನೇತೃತ್ವದ ರೈತ ಸಂಘ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರಕ್ಕೆ ಈರುಳ್ಳಿಯಿಂದ ಮಾಡಿರುವ ಹಾರ ಹಾಕಿ ವಿನೂತನವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈರುಳ್ಳಿ ದರ‌ ಕುಸಿದಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಸಂಕಷ್ಟಕ್ಕೆ ದನಿಯಾಗುತ್ತಿಲ್ಲ ಎಂದು ಗುಡುಗಿದರು.

ಕೋಲಾರ ಜಿಲ್ಲೆ ಶ್ರೀನಿವಾಸಪುರದಲ್ಲಿ ಶಾಲಾಬಸ್ ಮತ್ತು ಸರ್ಕಾರಿ ಬಸ್ ತಡೆದು ಪ್ರತಿಭಟನಾಕಾರರು ಪ್ರತಿಭಟನೆಗೆ ಮುಂದಾದರು. ಇನ್ನೊಂದೆಡೆ ಚಿಕ್ಕಬಳ್ಳಾಪುರದ ಬಾಗೇಪಲ್ಲಿಯಲ್ಲಿ ಭಾರತ್ ಬಂದ್ ಬೆಂಬಲಿಸಿ ಪ್ರತಿಭಟನಾಕಾರರು ಬೈಕ್ ರ್ಯಾಲಿ ನಡೆಸುತ್ತಿದ್ದಾರೆ.

 ಭಾರತ್ ಬಂದ್ ಗೆ ಬೆಂಬಲವಾಗಿ ದಾವಣಗೆರೆಯಲ್ಲಿ ವಿವಿಧ ಸಂಘಟನೆಗಳು ಬಂದ್ ನಡೆಸುತ್ತಿವೆ. ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಲಾಯಿತು. ದಾವಣಗೆರೆಯ ಮುಖ್ಯ ರಸ್ತೆ, ವೃತ್ತಗಳನ್ನು ಹೊರತುಪಡಿಸಿ ಇತರೆಡೆ ಬಂದ್ ಗೆ ಅಂತಹ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ. ಮೈಸೂರು, ಮಂಡ್ಯ, ಹಾಸನ ಸೇರಿ ರಾಜ್ಯದ ವಿವಿಧೆಡೆ ಜನ ಸಂಚಾರ ಎಂದಿನಂತೆ ಇದ್ದುಯ ಭಾರತ್ ಬಂದ್ ಕೇವಲ ಪ್ರತಿಭಟನೆಗಷ್ಟೇ ಸೀಮಿತವಾಗಿದೆ.

Key words: Bharat Bandh- opposes – Agricultural -Amendment –Act-protest

ENGLISH SUMMARY…

Bharath Bundh against amended agri bill: Road block in several places across the State
Bengaluru, September 27, 2021 (www.justkannada.in): Protests are going on in several places across the country today following the Bharath Bundh call given by the farmers’ organizations against the Govt. of India’s amended agriculture bill.
Protests are also being conducted at several places in the State. Police took the protestors into custody in several places. The protest in the capital city Bengaluru is still going on. The police took farmer leader Kurubur Shantakumar into custody at the Mourya circle even before the protest commenced.
However, the Bharath Bundh has not affected the common people. The movement of government buses was normal across the state and even all the markets, hotels, and shops are open and the movement of people is also normal.
Keywords: Bharath Bundh/ India/ Karnataka/ state/ protests/ normal life