ಮಾತೆತ್ತಿದ್ರೆ ಹೊಡಿ ಬಡಿ ಕಡಿ ಅಂತಾನೆ. ಹಾಳು ಮಾಡಿಬಿಟ್ಟ ರೀ ನಮ್ಮ ಜಿಲ್ಲೆಯನ್ನಾ- ಸಚಿವ ಮತ್ತು ಸಂಸದರ ನಡುವಿನ ಪಿಸುಮಾತು ವೈರಲ್.  

ತುಮಕೂರು,ಜನವರಿ,6,2022(www.justkannada.in): ದಕ್ಷಿಣ ಕೋರಿಯಾದ ಕಿಂಗ್ ಜಾಂಗ್ ಉನ್ ನಂತೆ ಅವನು. ಮಾತೆತ್ತಿದ್ರೆ ಹೊಡಿ ಬಡಿ ಕಡಿ ಅಂತಾನೆ. ಹಾಳು ಮಾಡಿಬಿಟ್ಟ ರೀ ನಮ್ಮ ಜಿಲ್ಲೆಯನ್ನಾ..?  ಹೀಗೆ ಸಚಿವ ಜೆಸಿ ಮಾಧುಸ್ವಾಮಿ ವಿರುದ್ಧ ಪರೋಕ್ಷವಾಗಿ ಏಕವಚನದಲ್ಲೇ ವಾಗ್ದಾಳಿ ನಡೆಸಿರುವುದು ಬಿಜೆಪಿ ಸಂಸದ ಜಿ.ಎಸ್ ಬಸವರಾಜು.

ಹೌದು ಸುದ್ಧಿಗೋಷ್ಠಿ ವೇಳೆ ಸಚಿವ ಭೈರತಿ ಬಸವರಾಜು ಮತ್ತು ಸಂಸದ ಬಸವರಾಜು ನಡುವಿನ ಪಿಸುಮಾತು ಮಾಧ್ಯಮಗಳಲ್ಲಿ ವೈರಲ್ ಆಗಿದೆ.  ಸಚಿವ ಮಾಧುಸ್ವಾಮಿ ವಿರುದ್ಧ ಸಂಸದ ಬಸವರಾಜು ಪರೋಕ್ಷವಾಗಿ ಸಚಿವ ಭೈರತಿ ಬಸವರಾಜು ಬಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಕೋರಿಯಾದ ಕಿಂಗ್ ಜಾಂಗ್ ಉನ್ ಇವನು  . ಹಾಳುಮಾಡಿಬಿಟ್ಟ ರೀ ನಮ್ಮ ಜಿಲ್ಲೆಯನ್ನಾ..?  ಮಾತೆತ್ತಿದರೇ ಹೊಡಿ ಬಡಿ ಕಡಿ  ಅಂತಾನೆ  ಮುಂದೆ ನಮ್ಮ ಜಿಲ್ಲೆಯಲ್ಲಿ ಒಂದು ಸೀಟು ಬರಲ್ಲ. ಅವನ್ ಯಾವನ್ ಒಬ್ಬ ಇಂಜಿನಿಯರ್ ಗೆ ಹೇಳ್ತಾನೆ. ಲೇ ನೀನು ಏನ್  ಹೆಂಡ್ತಿ ಸೀರೆ ಒಗಿಯೋಕೆ ಲಾಯಕ್  ನಡಿ ಆಚೆಗೆ ಅಂತಾನೆ.

ಮೊನ್ನೆ ಸಾವಿರ ಕೋಟಿ ರೂ.  ಡಿಕ್ಲೇರ್ ಮಾಡಿಕೊಂಡು ಬಂದವ್ನೆ. ಸಾವಿರ ಕೋಟಿ ಅನುದಾನ ತಂದಿದ್ದಾನೆ. ಕಾರ್ಯಕ್ರಮಕ್ಕೆ  ನಮಗೆ ಯಾರಿಗೂ ಇನ್ವಿಟೇಷನ್ ಇಲ್ಲ. ನಮ್ಮನ್ನ ಕರೆಯೋದು ಇಲ್ಲ ಎಂದು ಸಚಿವ ಮಾಧುಸ್ವಾಮಿ ವಿರುದ್ಧ  ಸಚಿವ ಭೈರತಿ ಬಸವರಾಜು ಬಳಿ ಸಂಸದ ಬಸವರಾಜು ಹೀಗೆ ಕಿಡಿಕಾರಿದ್ದಾರೆ ಎನ್ನಲಾಗಿದೆ. ಇದೀಗ ಇದು ವೈರಲ್ ಆಗಿದೆ.

Key words: between – minister Byrathi Basavaraj –tumakur MP-GS Basavaraj