Thursday, August 13, 2026

BDA Apartments

Home Front Page ರಾಜಕಾರಣಿಗಳನ್ನ ಟ್ರ್ಯಾಪ್ ಮಾಡಲಾಗುತ್ತಿದೆ: ಸಿಡಿ ಕೇಸ್ ಸಿಬಿಐಗೆ ವಹಿಸುವುದು ಒಳ್ಳೆಯದು- ಸಚಿವ ಅಶ್ವಥ್ ನಾರಾಯಣ್.

ರಾಜಕಾರಣಿಗಳನ್ನ ಟ್ರ್ಯಾಪ್ ಮಾಡಲಾಗುತ್ತಿದೆ: ಸಿಡಿ ಕೇಸ್ ಸಿಬಿಐಗೆ ವಹಿಸುವುದು ಒಳ್ಳೆಯದು- ಸಚಿವ ಅಶ್ವಥ್ ನಾರಾಯಣ್.

ರಾಮನಗರ,ಫೆಬ್ರವರಿ,3,2023(www.justkannada.in): ರಾಜಕಾರಣಿಗಳನ್ನ ಟ್ರ್ಯಾಪ್ ಮಾಡಲಾಗುತ್ತಿದೆ. ರಮೇಶ್ ಜಾರಕಿಹೊಳಿ ಹೇಳಿದಂತೆ  ಸಿಡಿ ಕೇಸ್ ಸಿಬಿಐಗೆ ವಹಿಸುವುದು ಒಳ್ಳೆಯದು ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಅಭಿಪ್ರಾಯಪಟ್ಟರು.

ರಾಮನಗರದಲ್ಲಿ ಇಂದು ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, ಕಾಂಗ್ರೆಸ್  ಬ್ಲಾಕ್ ಮೇಲ್ ಪಕ್ಷ,  ಸಿಡಿ ಪಕ್ಷ ಎಂದು ಕರೆಯುತ್ತಾರೆ. ಇದರಲ್ಲಿ ಡಿಕೆ ಶಿವಕುಮಾರ್  ಪರಿಣಿತರಾಗಿದ್ದಾರೆ. ಕಾಂಗ್ರೆಸ್ ನಲ್ಲಿ ಇಂತಹ ನಾಯಕರು ತುಂಬಾ ಇದ್ದಾರೆ. ಇಂಥ ಜಾಲವನ್ನು ಇಟ್ಟುಕೊಂಡಿರುವುದು ಸಮಾಜಕ್ಕೆ ಒಳ್ಳೆಯದಲ್ಲ. ಸಿಡಿ ಮಾಡೊದು ಕೆಟ್ಟ ಸಂಸ್ಕೃತಿ.  ರಮೇಶ್ ಒತ್ತಾಯದಂತೆ ಸಿಬಿಐ ತನಿಖೆ ಒಳ್ಳೆಯದು.  ಬಹಳಷ್ಟು ನಾಯಕರು ಈ ಜಾಲದಲ್ಲಿ ಸಿಲುಕಿರಬಹುದು ಎಂದು ಹೇಳಿದರು.

ರಾಜಕಾರಣಿಗಳನ್ನ ಟ್ರ್ಯಾಪ್ ಮಾಡಲಾಗುತ್ತಿದೆ. ಇಂತಹದೊಂದು ವ್ಯವಸ್ಥಿತ ನೆಟ್ ವರ್ಕ್ ಇದೆ.  ಪ್ರತಿನಿಧಿಗಳ ಬದುಕು ಹಾಳು ಮಾಡಲಾಗುತ್ತಿದೆ. ಇಂತಹ ನಾಯಕರ ಬಂಡವಾಳ ಬಯಲು ಮಾಡಬೇಕು. ಈಗ ಕಾಂಗ್ರೆಸ್ ನವರಿಗೆ ಆತಂಕ ಶುರುವಾಗಿದೆ. ಆದರೆ ತನಿಖೆ ಮಾಡಿ ಅಂತಾ ಕಾಂಗ್ರೆಸ್ ನವರು ಹೇಳುತ್ತಿಲ್ಲ ಎಂದು ಸಚಿವ ಅಶ್ವಥ್ ನಾರಾಯಣ್ ಕಿಡಿಕಾರಿದರು.

Key words: better – CD- case – CBI-Minister -Aswath Narayan.