ಬಂಡೀಪುರಕ್ಕೆ ಮತ್ತೊಮ್ಮೆ ಒಲಿದ ‘ಅತ್ಯುತ್ತಮ ವನ್ಯಧಾಮ’ ಪ್ರಶಸ್ತಿ.

ಗುಂಡ್ಲುಪೇಟೆ,ಮಾರ್ಚ್,4,2024(www.justkannada.in):  ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಮತ್ತೊಮ್ಮೆ ‘ಅತ್ಯುತ್ತಮ ವನ್ಯಧಾಮ’ ಪ್ರಶಸ್ತಿ ಲಭ್ಯವಾಗಿದೆ.

ಕೇಂದ್ರ ಸರ್ಕಾರ ನಡೆಸುವ ಸಮೀಕ್ಷೆಯಲ್ಲಿ ಬಂಡೀಪುರ ಎರಡನೇ ಅತ್ಯುತ್ತಮ ವನ್ಯಧಾಮ ಎಂದು  ಎಂಬ ಗರಿಮೆಗೆ ಪಾತ್ರವಾಗಿದೆ.  ಪ್ರತಿ ವರ್ಷವೂ  ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ, ವೈಲ್ಡ್ ಲೈಫ್ ಇನ್‌ ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಮಿನಿಸ್ಟ್ರಿ ಆಫ್ ಎನ್ವೆರ್ನ್ಸೆಂಟ್ ಆ್ಯಂಡ್ ಫಾರೆಸ್ಟ್ ಸಂಸ್ಥೆ ಈ ಸಮೀಕ್ಷೆಯನ್ನ ನಡೆಸುತ್ತದೆ. ಇದೀಗ  ದೇಶದ 54 ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಮೀಕ್ಷೆ ನಡೆದಿದ್ದು, ಪ್ರಸಕ್ತ ಸಾಲಿನ ಸಮೀಕ್ಷೆಯಲ್ಲಿ ಬಂಡೀಪುರ ಎರಡನೇ ಬಾರಿ ಅತ್ಯುತ್ತಮ ವನ್ಯಧಾಮ ಎಂಬ ಪ್ರಶಸ್ತಿ ಭಾಜನವಾಗಿದೆ.

ಕೇರಳದ ಪೆರಿಯಾರ್ ಹುಲಿ ಸಂರಕ್ಷಿತ ಪ್ರದೇಶಕ್ಕೆ ಮೊದಲ ಸ್ಥಾನ, ಬಂಡಿಪುರ ಎರಡನೇ ಸ್ಥಾನ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಕ್ಕೆ ಮೂರನೇ ಸ್ಥಾನ ಲಭಿಸಿದೆ.  ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ, ಮಾನವ ಮತ್ತು ಪ್ರಾಣಿ ಸಂಘರ್ಷ ತಡೆಗೆ ಕೈಗೊಂಡ ಕ್ರಮಗಳು, ಪ್ರವಾಸಿಗರು, ಶುಚಿತ್ವ, ಸಿಬ್ಬಂದಿ ಮುಂತಾದ ಅಂಶಗಳ ಮಾನದಂಡಗಳ ಪರಿಗಣಿಸಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಬಂಡೀಪುರಕ್ಕೆ  ಸತತ ಮೂರನೇ ಬಾರಿಗೆ ಎರಡನೇ ಸ್ಥಾನ ಸಿಕ್ಕಿದ್ದು ಈ  ಕುರಿತು ಬಂಡಿಪುರ ಸಿಎಫ್ ಡಾ.ರಮೇಶ್ ಕುಮಾರ್ ಮಾಹಿತಿ ನೀಡಿದರು. ಬಂಡಿಪುರ ಅರಣ್ಯ ಇಲಾಖೆ ಸಿಬ್ಬಂದಿ ವರ್ಗದ ಪರಿಶ್ರಮಕ್ಕೆ ಸಿಫ್ ಡಾ. ರಮೇಶ್ ಕುಮಾರ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Key words: Best -Wildlife Sanctuary Award – Bandipur- again.