ಗಾಳಿ ಮಳೆಗೆ ಹಾನಿ: ಗ್ರಾಹಕರಿಗೆ ಪರ್ಯಾಯ ವಾಟ್ಸ್‌ ಆಪ್‌ ಮತ್ತು ಎಸ್‌ಎಂಎಸ್‌  ದೂರವಾಣಿ ಸಂಖ್ಯೆ ನೀಡಿದ ಬೆಸ್ಕಾಂ.

ಬೆಂಗಳೂರು,ಮೇ,7,2024 (www.justkannada.in): ಬೆಸ್ಕಾಂ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಿಂದ ಸುರಿದ ಗಾಳಿ-ಮಳೆಗೆ ವಿದ್ಯುತ್‌ ಕಂಬಗಳು ಮುರಿದು, ವಿದ್ಯುತ್‌ ಮೂಲ ಸೌಕರ್ಯಗಳು ಹಾನಿಗೊಳಗಾಗಿವೆ. ಹೀಗಾಗಿ ಗ್ರಾಹಕರಿಗೆ ಬೆಸ್ಕಾಂ ಪರ್ಯಾಯ ವಾಟ್ಸ್‌ ಆಪ್‌ ಮತ್ತು ಎಸ್‌ಎಂಎಸ್‌  ದೂರವಾಣಿ ಸಂಖ್ಯೆ ನೀಡಿದೆ.

ಮಳೆಗಾಳಿಯಿಂದಾಗಿ ವಿದ್ಯುತ್ ಕಂಬಗಳಿಗೆ  ಹಾನಿ ಹಿನ್ನೆಲೆ ಬೆಸ್ಕಾಂ ಸಹಾಯವಾಣಿ 1912ಗೆ ದೂರುಗಳು ಹರಿದು ಬಂದಿದ್ದು, ಕರೆಗಳ ಒತ್ತಡದಿಂದಾಗಿ ಗ್ರಾಹಕರಿಗೆ 1912 ಸಂಪರ್ಕ ಸಾಧ್ಯವಾಗುತ್ತಿಲ್ಲ. ಮಳೆಗಾಲದಲ್ಲಿ ಗ್ರಾಹಕರ ವಿದ್ಯುತ್‌ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ  ಗ್ರಾಹಕರಿಗೆ ಈ ಕೆಳಕಂಡ ಪಯಾರ್ಯ ವಾಟ್ಸ್‌ ಆಪ್‌ ಸಂಖ್ಯೆಗಳನ್ನು ನೀಡಲಾಗಿದೆ.

ವಾಟ್ಸ್‌ಪ್‌ ಸಂಖ್ಯೆಗಳಿಗೆ ಗ್ರಾಹಕರು ಸಂದೇಶ ಹಾಗೂ ಛಾಯಚಿತ್ರಗಳನ್ನು ತಮ್ಮ ವಿಳಾಸದೊಂದಿಗೆ ಕಳುಹಿಸಿ ತಮ್ಮ ವಿದ್ಯುತ್‌ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದಾಗಿದೆ. ಜೊತೆಗೆ ಎಸ್‌ ಎಂಎಸ್ ಗಳನ್ನು ಕಳುಹಿಸಲು ಬೆಸ್ಕಾಂ ಬೆಂಗಳೂರು ಮಹಾನಗರ ವ್ಯಾಪ್ತಿಯ ಗ್ರಾಹಕರಿಗೆ 12 ಮೊಬೈಲ್‌ ಸಂಖ್ಯೆಗಳನ್ನು ಕೂಡ ಒದಗಿಸಲಾಗಿದೆ.

ಜಿಲ್ಲಾವಾರು ವಾಟ್ಸ್‌ ಆಪ್‌ ಸಂಖ್ಯೆಗಳು

ಬೆಂಗಳೂರು ಪೂರ್ವ- 8277884013, ಬೆಂಗಳೂರು ಪಶ್ಚಿಮ- 8277884012, ಬೆಂಗಳೂರು ಉತ್ತರ- 8277884014, ಬೆಂಗಳೂರು ದಕ್ಷಿಣ- 8277884011. ಕೋಲಾರ- 8277884015, ಚಿಕ್ಕಬಳ್ಳಾಪುರ- 8277884016, ಬೆಂಗಳೂರು ಗ್ರಾಮಾಂತರ- 8277884017, ರಾಮನಗರ- 8277884018, ತುಮಕೂರು- 8277884019, ಚಿತ್ರದುರ್ಗ- 8277884020 ಹಾಗೂ ದಾವಣಗೆರೆ- 8277884021. ಸುರಕ್ಷತೆ ಸಂಬಂಧಿಸಿದ ದೂರುಗಳಿಗೆ ವಾಟ್ಸ್‌ ಆಪ್‌ ಸಂಖ್ಯೆ – 9483191212, 9483191222 ಮತ್ತು ಬೆಸ್ಕಾಂ ಸಾಮಾನ್ಯ ವಾಟ್ಸ್‌ ಆಪ್‌ ಸಂಖ್ಯೆ-  9449844640.

ಈ ಕೆಳಗಿನ ಮೊಬೈಲ್‌ ಸಂಖ್ಯೆಗಳು- ಕೇವಲ ಎಸ್‌ಎಂಎಸ್‌ ಗಳಿಗೆ ಮಾತ್ರ:

9480816108, 9480816109, 9480816110, 9480816111, 9480816112, 9480816113, 9480816114, 9480816115, 9480816116, 9480816117, 9480816118 ಮತ್ತು 9480816119.

Key words: Bescom, alternative, WhatsApp, SMS, numbers