ಮೈಸೂರು, ಮೇ ೨೦,೨೦೨೫: ಮೈಸೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಸಿಎನ್ ರಾಜು ಅವರು ರೂಪಿಸಿದ್ದ ವಿಶೇಷ ಶೈಕ್ಷಣಿಕ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಾಜ್ಯ ಯೋಜನಾ ನಿರ್ದೇಶಕರು, ಜಿಲ್ಲೆಯಲ್ಲಿ ಮಾಡಿರುವ ಬೆಸ್ಟ್ ಪ್ರಾಕ್ಟಿಸ್ ಗಳನ್ನು ಯೋಜನೆಯಲ್ಲಿ ಸೇರಿಸಲು ರಾಜ್ಯ ಹಂತದ ನಿರ್ದೇಶಕರುಗಳಿಗೆ ಸೂಚಿಸಿದರು.
ಡಯಟ್ ನಲ್ಲಿ ನಡೆದ ಮೈಸೂರು ವಿಭಾಗಿಯ ಮಟ್ಟದ ಪ್ರಗತಿ ಪರಿಶೀಲನ ಸಭೆಯಲ್ಲಿ ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕ ಡಾ. ಕುರ್ಮಾ ರಾವ್ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ 2023 -24 ಹಾಗೂ 2024- 25 ನೇ ಸಾಲಿನಲ್ಲಿ ರೂಪಿಸಿದ್ದ ವಿಶೇಷವಾದ ಶೈಕ್ಷಣಿಕ ಯೋಜನೆಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಸಿಎನ್ ರಾಜು ಮೈಸೂರು ಜಿಲ್ಲೆಯ ಪರವಾಗಿ ಪ್ರಸ್ತುತಪಡಿಸಿದರು.
- ದಿನಗಳು 50 ಕಲಿಕಾ ಸಂಪತ್ತು , 2. ಕಲಿಕಾ ಖಾತ್ರಿ ಪರೀಕ್ಷೆಗಳು , 3. ಭಾಷಾ ಪ್ರಯೋಗಾಲಯಗಳು
- ನಾನು ಓದುತ್ತಿದ್ದೇನೆ(5 ರಿಂದ 10ನೆ ತರಗತಿ) , 5. ಕಲಿಕಾಮೃತ ( ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ )
- English Empowerment Program (EEP) 7. English Fest.
ಈ ಕಾರ್ಯಕ್ರಮಗಳ ಬಗ್ಗೆ ಸವಿವರವಾಗಿ ಪಿಪಿಟಿ ಮೂಲಕ ಸಭೆಗೆ ವಿವರಣೆ ನೀಡಿದರು. ಇದರಿಂದ ಉತ್ತೇಜಿತರಾಗಿ ಜಿಲ್ಲೆಯಲ್ಲಿ ಮಾಡಿರುವ ಬೆಸ್ಟ್ ಪ್ರಾಕ್ಟಿಸ್ ಗಳನ್ನು ಯೋಜನೆಯಲ್ಲಿ ಸೇರಿಸಲು ರಾಜ್ಯ ಹಂತದ ನಿರ್ದೇಶಕರುಗಳಿಗೆ ಸಭೆಯಲ್ಲಿ ಸೂಚಿಸಲಾಯಿತು.
ಈ ಕಾರ್ಯಕ್ರಮಗಳ ಫಲವಾಗಿ ಈ ಬಾರಿ ಎಸ್.ಎಸ್. ಎಲ್. ಸಿ ಫಲಿತಾಂಶದಲ್ಲಿ ಜಿಲ್ಲೆಗೆ ಮೈಸೂರು ದಕ್ಷಿಣ ವಲಯ ಶೇಕಡ 79.83 ಫಲಿತಾಂಶ ಪಡೆದು ಅಗ್ರಸ್ಥಾನದಲ್ಲಿದೆ.
ಮೈಸೂರು ದಕ್ಷಿಣ ವಲಯ ಬಿಇಒ ರಾಜು ಅವರ ಕಾರ್ಯಕ್ರಮಗಳ ಸಾಧನೆಯ ನೋಡಿ ಮೈಸೂರು ವಿಭಾಗದ ಎಲ್ಲಾ ಉಪನಿರ್ದೇಶಕರು ಹಾಗೂ ಅಧಿಕಾರಿಗಳು ಸಭೆಯಲ್ಲಿ ಪ್ರ ಸಂಶೆ ವ್ಯಕ್ತಪಡಿಸಿದರು.
ಸಭೆಯಲ್ಲಿ ನಿರ್ದೇಶಕರಾದ ಮಾದೇಗೌಡ, ಮಾರುತಿ, ಸಹ ನಿರ್ದೇಶಕ ಪಾಂಡುರಂಗ, ಗೀತಾಂಬ (ಪ್ರಾಂಶುಪಾಲರು ಸಿಟಿಇ), ರಾಜ್ಯ ಅಕ್ಷರ ದಾಸೋಹ ನಿರ್ದೇಶಕರು, ರಾಜ್ಯ ಮುಖ್ಯ ಲೆಕ್ಕಾಧಿಕಾರಿಗಳು ಮುಖ್ಯ ಅಭಿಯಂತರರು ಹಾಗೂ ಮೈಸೂರು ವಿಭಾಗದಿಂದ ಭಾಗವಹಿಸಿದ್ದ ಎಂಟು ಜಿಲ್ಲೆಗಳ ಉಪ ನಿರ್ದೇಶಕರು ಹಾಜರಿದ್ದರು.
key words: The Southern Zone BEO, C.N. Raju, appreciated, state project director, Mysore
The Southern Zone BEO C.N. Raju is appreciated by the state project director for his efficiency.