ಬೆಂಗಳೂರು-ತುಮಕೂರು ಮೆಮು ರೈಲಿನ ವೇಳಾಪಟ್ಟಿ ಬದಲಾವಣೆ

ಬೆಂಗಳೂರು, ನವೆಂಬರ್ 26, 2023 (www.justkannada.in): ಬೆಂಗಳೂರು-ತುಮಕೂರು ಮೆಮು ರೈಲಿನ ವೇಳಾಪಟ್ಟಿಯನ್ನು ಬದಲಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಈ ಎರಡೂ ನಗರಗಳ ಸಂಚಾರದ ವ್ಯವಸ್ಥೆಯಲ್ಲಿ ಸುಧಾರಣೆ ತರಲು ತುಮಕೂರು- ಬೆಂಗಳೂರು ಮೆಮು ರೈಲು ವೇಳಾಪಟ್ಟಿಯನ್ನು ಬದಲಾಣೆ ಮಾಡಲಾಗಿದೆ.

ಹೀಗಿದೆ ಬದಲಾದ ವೇಳಾಪಟ್ಟಿ: ರೈಲು ನಂಬರ್ 06575 ಕೆಎಸ್‌ಆರ್ ಬೆಂಗಳೂರು-ತುಮಕೂರು ಮೆಮು ರೈಲು ಕೆಎಸ್‌ಆರ್ ಬೆಂಗಳೂರು (ಮಜೆಸ್ಟಿಕ್) ನಿಲ್ದಾಣದಿಂದ ಮಧ್ಯಾಹ್ನ 1.45ಕ್ಕೆ ಹೊರಡಲಿದೆ. ತುಮಕೂರು ನಗರಕ್ಕೆ 3.43ಕ್ಕೆ ತಲುಪಲಿದೆ.

ರೈಲು ನಂಬರ್ 06572 ತುಮಕೂರು-ಕೆಎಸ್‌ಆರ್ ಬೆಂಗಳೂರು ಮೆಮು ರೈಲು ತುಮಕೂರಿನಿಂದ 3.50ಕ್ಕೆ ಹೊರಡಲಿದೆ. ಕೆಎಸ್‌ಆರ್‌ ಬೆಂಗಳೂರು ರೈಲು ನಿಲ್ದಾಣವನ್ನು 5.30ಕ್ಕೆ ತಲುಪಲಿದೆ.