ಮುಸ್ಲಿಂ ಸಮುದಾಯಕ್ಕೆ 2ಬಿ ಮೀಸಲಾತಿಗೆ ಆಗ್ರಹ : ಕೋಲಾರದಿಂದ ಬೆಂಗಳೂರಿಗೆ ಪಾದಯಾತ್ರೆ

 

ಬೆಂಗಳೂರು, ಫೆ. ೨೭, ೨೦೨೪   : ಮುಸ್ಲಿಂ ಸಮುದಾಯಕ್ಕೆ 2ಬಿ ಮೀಸಲಾತಿಗೆ ಆಗ್ರಹಿಸಿ,  26 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್‌  ಫಾರೂಕ್ ಜುನೈದಿ ಅವರು ಕೋಲಾರದಿಂದ ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡಿದ್ದಾರೆ.

ಬಸವರಾಜ ಬೊಮ್ಮಾಯಿ ನೇತೃತ್ವದ ಹಿಂದಿನ ಬಿಜೆಪಿ ಸರಕಾರ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿಯನ್ನು ರದ್ದುಗೊಳಿಸಿತ್ತು. ಮೀಸಲಾತಿಯನ್ನು ರದ್ದುಪಡಿಸಿದ ನಂತರ, ಸಮುದಾಯದ ಅನೇಕ ವಿದ್ಯಾರ್ಥಿಗಳು ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ಮತ್ತು ಮೆರಿಟ್ ಆಧಾರಿತ ವಿದ್ಯಾರ್ಥಿವೇತನದಿಂದ ವಂಚಿತರಾಗಿದ್ದಾರೆ ಎಂದು ಜುನೈದಿ ಹೇಳಿದರು.

ಸಾಲ ಪಡೆದು ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೂ ಪರಿಣಾಮ ಬೀರಿದ್ದು, ದೀರ್ಘಾವಧಿಯಲ್ಲಿ ಸಮುದಾಯ ಸಂಕಷ್ಟಕ್ಕೆ ಸಿಲುಕಲಿದೆ. ಇದು ಪಾದಯಾತ್ರೆ ಕೈಗೊಳ್ಳುವಂತೆ ಪ್ರೇರೇಪಿಸಿತು ಎಂದಿದ್ದಾರೆ ಜುನೈದಿ.

 

 

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಎಂಜಿನಿಯರ್‌ಗಳ ಸಂಘದ ಅಧ್ಯಕ್ಷರೂ ಆಗಿರುವ ಜುನೈದಿ ಅವರು, “2ಬಿ ವರ್ಗದಡಿ ಅಲ್ಪಸಂಖ್ಯಾತ ಮೀಸಲಾತಿಯನ್ನು ಮರುಸ್ಥಾಪಿಸಲು ಫೆಬ್ರವರಿ 24 ರಂದು ಕೋಲಾರದಿಂದ ಬೆಂಗಳೂರಿಗೆ ಮತ್ತು ಜಾಗೃತಿ ಮೂಡಿಸಲು ಪಾದಯಾತ್ರೆ ಪ್ರಾರಂಭಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಅವರನ್ನು ಭೇಟಿ ಮಾಡಿ ಪ್ರಾತಿನಿಧ್ಯ ನೀಡಲು ಕೋರಿ ಮನವಿ ಸಲ್ಲಿಸಲಿದ್ದಾರೆ.

ಮುಸ್ಲಿಮರಿಗೆ ಶೇಕಡಾ 4 ರಷ್ಟು ಮೀಸಲಾತಿ ನೀಡುತ್ತಿದ್ದ 2B ಕೋಟಾವನ್ನು ಮರುಸ್ಥಾಪಿಸುವುದು ಮಾತ್ರವಲ್ಲದೆ, ಅದನ್ನು ಶೇಕಡಾ 10 ಕ್ಕೆ ಹೆಚ್ಚಿಸುವುದು, ಜೊತೆಗೆ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಶೇಕಡಾ 7 ರಷ್ಟು ಸೂಪರ್ ನ್ಯೂಮರಿಕ್ ಕೋಟಾ (SNQ)  ಜಾರಿಗೂ ಸಹ ಪ್ರಯತ್ನಿಸಲಾಗುವುದು ಎಂದಿದ್ದಾರೆ.

 ಕೃಪೆ : ದಿ ನ್ಯೂ ಇಂಡಿಯನ್‌ ಎಕ್ಸ್‌ ಪ್ರೆಸ್‌

Key words :Bengaluru – Techie seeks –  2B quota – for Muslims – walks from Kolar.

summary :

The reservation was scrapped by the previous BJP government led by Basavaraj Bommai. Junaidi said that following the scrapping of reservation, many students from the community were deprived of pre-metric, post-metric and merit-based scholarships. The students who used to take loans and pursue higher studies abroad were also impacted, and in the long run, the community will suffer. This prompted him to undertake the padayatra.