ಬೆಂಗಳೂರು,ಡಿಸೆಂಬರ್,29,2025 (www.justkannada.in): ಹೊಸ ವರ್ಷಾಚರಣೆಗೆ ಮೂರು ದಿನಗಳು ಬಾಕಿ ಇದ್ದು ಈ ಮಧ್ಯೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸರು ಅಲರ್ಟ್ ಆಗಿದ್ದು ಭದ್ರತೆಗಾಗಿ 20 ಸಾವಿರ ಪೊಲೀಸರನ್ನ ನಿಯೋಜಿಸಲಾಗುತ್ತಿದೆ.
ಈ ಕುರಿತು ಮಾತನಾಡಿದ ಮಾಹಿತಿ ನೀಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್, ಹೊಸ ವರ್ಷಾಚರಣೆಗೆ ನಗರದಲ್ಲಿ ಭದ್ರತೆಗಾಗಿ 20 ಸಾವಿರ ಪೊಲೀಸರನ್ನು ನೇಮಕ ಮಾಡಲಾಗುತ್ತದೆ. 4 ಪೊಲೀಸ್ ಕಂಟ್ರೋಲ್ ರೂಮ್, 46 ಆ್ಯಂಬುಲೆನ್ಸ್, 55 ಅಗ್ನಿಶಾಮಕ ದಳದ ವಾಹನ, 164 ಮಹಿಳಾ ಸಹಾಯ ಕೇಂದ್ರ, 400 ಟ್ರಾಫಿಕ್ ವಾರ್ಡನ್ 3 ಕಮಾಂಡೋ ಟೀಂ, 3341 ಹೋಮ್ ಗಾರ್ಡ್ 2436 ಸಂಚಾರ ಪೊಲೀಸರು, 78 ವಾಚ್ ಟವರ್ ವ್ಯವಸ್ಥೆ ಮಾಡಲಾಗುತ್ತದೆ. ಯಾವುದೇ ಕಾರಣಕ್ಕೂ ಸಾರ್ವಜನಿಕ ಶಾಂತಿಗೆ ಧಕ್ಕೆಯಾಗಲ್ಲ ಎಂದು ತಿಳಿಸಿದರು.
ಡಿಸೆಂಬರ್ 31ರ ರಾತ್ರಿ 10 ಗಂಟೆ ಬಳಿಕ 50 ಫ್ಲೈಓವರ್ ಬಂದ್ ಆಗಲಿದೆ. ಬೆಂಗಳೂರಿನ 166 ಕಡೆ ಡ್ರಂಕ್ ಅಂಡ್ ಡ್ರೈವ್ ಟೆಸ್ಟ್ ಮಾಡಲಾಗುತ್ತದೆ. ವೀಲ್ಹಿಂಗ್ ಮಾಡುವವರ ಮೇಲೆ ಕಣ್ಣಿಡಲಾಗಿದೆ. 92 ಕಡೆ ವೀಲ್ಹಿಂಗ್ ಮಾಡುವ ಜಾಗಳನ್ನು ಗುರುತಿಸಲಾಗಿದೆ. ಅಲ್ಲಿ ಪೊಲೀಸರನ್ನ ನಿಯೋಜಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ತಿಳಿಸಿದರು.
Key words: High alert, Bengaluru, New Year, celebrations, police, security







