ದರ ಹೆಚ್ಚಳದಿಂದಾಗಿ ಎಲ್‌ ಪಿಜಿ ಯೋಜನೆಯಿಂದ ದೂರ ಉಳಿಯುತ್ತಿರುವ ಫಲಾನುಭವಿಗಳು.

ಬೆಂಗಳೂರು, ಜುಲೈ 5, 2021 (www.justkannada.in): ಹೆಚ್ಚುತ್ತಿರುವ ಎಲ್‌ಪಿಜಿ ಸಿಲಿಂಡರ್‌ ಗಳ ದರಗಳು ಕರ್ನಾಟಕ ಸರ್ಕಾರದ ಅನಿಲ ಭಾಗ್ಯ ಯೋಜನೆ ಮೇಲೆ ಪರಿಣಾಮ ಬೀರಿದ್ದು, ಅನೇಕ ಬಿಪಿಎಲ್ ಕುಟುಂಬಗಳು ಈ ಯೋಜನೆಯ ಲಾಭ ಪಡೆದುಕೊಳ್ಳುವುದರಿಂದ ದೂರ ಉಳಿಯುವಂತಾಗಿದೆ.jk

ರಾಜ್ಯದಲ್ಲಿ ಈ ಯೋಜನೆಯಡಿ ಬರುವ ಒಟ್ಟು ೯೭,೨೫೬ ಫಲಾನುಭಗಳ ಪೈಕಿ ೧೩,೦೦೦ಕ್ಕೂ ಹೆಚ್ಚಿನ ಫಲಾನುಭವಿಗಳು ಈ ವರ್ಷ ಒಂದೂ ಸಿಲಿಂಡರ್ ಅನ್ನು ಬುಕ್ ಮಾಡಿಲ್ಲ. ಜೊತೆಗೆ ೨೦,೦೦೦ ಇತರೆ ಫಲಾನುಭವಿಗಳು ಸಿಲಿಂಡರ್ ಬೆಲೆ ರೂ.೮೦೦ ದಾಟಿದ ನಂತರ ಎಲ್‌ಪಿಜಿ ಬಳಕೆಯನ್ನು ಒಂದೇ ಸಿಲಿಂಡರ್‌ಗೆ ಸೀಮಿತಗೊಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಕಳೆದ ವರ್ಷ ಪರಿಚಯಿಸಲಾದಂತಹ ಕೇಂದ್ರದ ಪ್ರಧಾನ ಮಂತ್ರಿ ಉಜ್ವಲ ಯೋಜನೆಗೂ ಸಹ ಇದೇ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಫಲಾನುಭವಿಗಳ ಅನುಕೂಲಕ್ಕಾಗಿ ಕರ್ನಾಟಕದ ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆಯು ಅನಿಲ ಭಾಗ್ಯ ಯೋಜನೆಯಡಿ ಐದು ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ ವಿತರಣೆಯನ್ನು ಆರಂಭಿಸಲು ಯೋಜಿಸುತ್ತಿದೆ.

ಅಧಿಕಾರಿಗಳ ಪ್ರಕಾರ, ಸರ್ಕಾರ ವಿತರಿಸುವ ಉಚಿತ ಸಿಲಿಂಡರ್‌ ಗಳು ಮುಗಿದ ನಂತರ ಈ ಯೋಜನೆಯ ಗ್ರಾಮೀಣ ಪ್ರದೇಶಗಳಲ್ಲಿನ ಫಲಾನುಭವಿಗಳು, ನೇರ ಲಾಭ ವರ್ಗಾವಣೆಯಡಿ (Direct Benefit Transfer) ಸಹಾಯಧನ ಲಭಿಸುತ್ತಿದ್ದರೂ ಸಹ ಒಂದೇ ಬಾರಿಗೆ ಸಿಲಿಂಡರ್ ಪಡೆಯಲು ಇಷ್ಟೊಂದು ದೊಡ್ಡ ಮೊತ್ತವನ್ನು ಪಾವತಿಸುವುದು ಸಾಧ್ಯವಾಗದೆ ಎಲ್‌ಪಿಜಿ ರಿಫೀಲ್ಲಿಂಗ್ ಮಾಡಿಸುತ್ತಿಲ್ಲ.

2018ರಲ್ಲಿ ಪರಿಚಯಿಸಲಾದ ಅನಿಲ ಭಾಗ್ಯ ಯೋಜನೆ ರಾಜ್ಯದ 30 ಲಕ್ಷ ಬಿಪಿಎಲ್ ಕುಟುಂಬಗಳನ್ನು ತಲುಪುವ ಗುರಿ ಹೊಂದಿದೆ. ಕಾಲಕ್ರಮೇಣ ಸರ್ಕಾರ ಈ ಯೋಜನೆಯಡಿ ಬರುವ ಫಲಾನುಭವಿಗಳ ಸಂಖ್ಯೆಯನ್ನು ಕೇವಲ ಒಂದು ಲಕ್ಷಕ್ಕೆ ಮಿತಿಗೊಳಿಸಿದೆ. ವರ್ಷದ ಆರಂಭದಲ್ಲಿ ಈ ಯೋಜನೆಯಡಿ ೯೭,೨೫೬ ಸಕ್ರಿಯ ಫಲಾನಭವಿಗಳಿದ್ದರು.

ದತ್ತಾಂಶಗಳ ಪ್ರಕಾರ ೧೩.೮%ರಷ್ಟು ಫಲಾನುಭವಿಗಳು (೧೩,೪೬೧ ಜನರು) ಈ ವರ್ಷ ಒಂದೇ ಒಂದು ಸಿಲಿಂಡರ್‌ ಗೂ ಬೇಡಿಕೆ ಇಟ್ಟಿಲ್ಲ. ಈ ವರ್ಷ ಏಪ್ರಿಲ್ ತಿಂಗಳಲ್ಲಿ ಎಲ್‌ ಪಿಜಿ ಸಿಲಿಂಡರ್ ಬೆಲೆ ಆಕಾಶ ಮುಟ್ಟಿದ ನಂತರ ಉಚಿತ ಸಿಲಿಂಡರ್ ಬುಕ್ಕಿಂಗ್ ಸಂಖ್ಯೆ ಮತ್ತಷ್ಟು ಇಳಿಕೆಯಾಗಿದೆ. ೩೨,೪೬೨ ಜನರು ಇನ್ನೂ ಸಹ ಎರಡನೇ ಸಿಲಿಂಡರ್ ಅನ್ನು ಬುಕ್ ಮಾಡಿಲ್ಲ.

ಈ ಕುರಿತು ಮಾತನಾಡಿದ ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಯೊಬ್ಬರು, “ಗ್ರಾಮೀಣ ಭಾಗಗಳಲ್ಲಿನ ಕುಟುಂಬಗಳಲ್ಲಿ ಎಲ್‌ ಪಿಜಿ ಸಿಲಿಂಡರ್‌ ಗಳು ಬಹಳ ಸಮಯದವರೆಗೂ ಬರುತ್ತವೆ, ಇದರಿಂದ ಯೋಜನೆಗೂ ಲಾಭವಾಗುತ್ತದೆ. ಹಾಗಾಗಿ ಪ್ರತಿ ತಿಂಗಳು ಸಿಲಿಂಡರ್‌ ಗಳು ಬುಕ್ ಆಗುವುದಿಲ್ಲ. ಆದರೆ, ಕಳೆದ ಎರಡು ವರ್ಷಗಳಿಂದ ಉಚಿತ ಸಿಲಿಂಡರ್‌ಗಳು ಖಾಲಿ ಆದ ನಂತರ ಫಲಾನುಭವಿಗಳು ಪುನಃ ಸಿಲಿಂಡರ್‌ ಗಳನ್ನ ಬುಕ್ ಮಾಡುತ್ತಲೇ ಇಲ್ಲ. ಒಂದು ಸಿಲಿಂಡರ್ ಅನ್ನು ಗರಿಷ್ಠ ಆರರಿಂದ ಏಳು ತಿಂಗಳವರೆಗೆ ಮಾತ್ರ ಬಳಸಬಹುದು.”

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿ.ಹೆಚ್. ಅನಿಲ್ ಕುಮಾರ್ ಅವರೂ ಸಹ ಈ ಪ್ರವೃತ್ತಿಯ ಬೆಳವಣಿಗೆಯನ್ನು ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, ಬಿಪಿಎಲ್ ಕುಟುಂಬಗಳು ಸಿಲಿಂಡರ್ ಬುಕ್ ಮಾಡುವಲ್ಲಿ ಎದುರಿಸುತ್ತಿರುವ ಕಷ್ಟವನ್ನು ಆಲಿಸಿ, ಅದನ್ನು ಬಗೆಹರಿಸಲು ಇಲಾಖೆ ಕ್ರಮಗಳನ್ನು ಕೈಗೊಳ್ಳುತ್ತಿದ್ದೆಯಂತೆ. “ಗ್ರಾಮೀಣ ಬಿಪಿಎಲ್ ಕುಟುಂಬಗಳಿಗೆ ಕೈಗೆಟಕುವ ದರಗಳಲ್ಲಿ ಎಲ್‌ಪಿಜಿ ಸಿಲಿಂಡರ್‌ ಗಳನ್ನು ಒದಗಿಸಲು ನಾವು 5 ಕೆಜಿ ಸಿಲಿಂಡರ್‌ ಗಳನ್ನು ಒದಗಿಸಲು ಪ್ರಸ್ತಾಪಿಸುತ್ತಿದ್ದೇವೆ ಹಾಗೂ ಈ ನಿಟ್ಟಿನಲ್ಲಿ ಇಂಧನ ಕಂಪನಿಗಳೊಂದಿಗೆ ಚರ್ಚೆ ನಡೆಸಲಾಗುತ್ತಿದೆ,” ಎನ್ನುತ್ತಾರೆ ಅನಿಲ್ ಕುಮಾರ್.

Key words: Beneficiaries – staying away -LPG scheme -due – rate- hike.