ಬೆಲ್ಲದ್ ದೆಹಲಿ ಭೇಟಿ: ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದ್ದಿಷ್ಟು…

ಬೆಂಗಳೂರು, ಜೂನ್ 13, 2021 (www.justkannada.in): ಶಾಸಕ ಬೆಲ್ಲದ್ ದೆಹಲಿ ಭೇಟಿ ನನಗೆ ಗೊತ್ತಿಲ್ಲ ಎಂದು ಸಚಿವ ಸಿ.ಪಿ. ಯೋಗೇಶ್ವರ್ ಸ್ಪಷ್ಟನೆ ನೀಡಿದ್ದಾರೆ.

ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ‘ಬೆಲ್ಲದ್ ಭೇಟಿ ವಿಷಯ ನನಗೆ ಗೊತ್ತಿಲ್ಲ. ನಾನು ರಾಜಕೀಯ ಮಾತನಾಡುವುದಿಲ್ಲ. ಸುಖಾಸುಮ್ಮನೆ ವಿವಾದವಾಗುತ್ತದೆ ಎಂದಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಮುಂದಿನ ಎರಡು ವರ್ಷ ನಾನೇ ಮುಖ್ಯಮಂತ್ರಿ ಎಂದು ನೀಡಿರುವ ಹೇಳಿಕೆ ಬಗ್ಗೆ ಮಾತನಾಡಿದ ಯೋಗೇಶ್ವರ್, ‘ಈಗ ಯಾರು ಬೇಡ ಎಂದಿದ್ದಾರೆ. ಈ ವಿಚಾರವಾಗಿಯೂ ನಾನು ಮಾತನಾಡುವುದಿಲ್ಲ’ ಎಂದಿದ್ದಾರೆ.

ಅರುಣ್ ಸಿಂಗ್ ನಮ್ಮ ನಾಯಕರು. ಶಾಸಕರನ್ನು ಭೇಟಿಯಾಗಲು ಬರುತ್ತಿದ್ದಾರೆ. ನಾನು ಸಹ ಅವರನ್ನು ಭೇಟಿ ಮಾಡುತ್ತೇನೆ ಎಂದು ಯೋಗೇಶ್ವರ್ ತಿಳಿಸಿದ್ದಾರೆ.