ವ್ಯಾಪಾರಿಯ ನಗ್ನ ವಿಡಿಯೋ ಮಾಡಿ ಹಣ ನೀಡುವಂತೆ ಬ್ಲಾಕ್ ಮೇಲ್ : ಇಬ್ಬರು ಮಹಿಳೆಯರು ಸೇರಿ 6 ಮಂದಿ ಅರೆಸ್ಟ್…

ಬೆಳಗಾವಿ,ಡಿ,4,2019(www.justkannada.in): ಬಟ್ಟೆ ವ್ಯಾಪಾರಿ ಬಳಿ ಸಾಲ ಪಡೆದು ಅದನ್ನ ವಾಪಸ್ ನೀಡದೆ ವ್ಯಾಪಾರಿಯ ನಗ್ನ ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದ 6 ಮಂದಿ ಆರೋಪಿಗಳನ್ನ ನಗರದ ಮಾಳಮಾರುತಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಿಬಿಆಯೇಶಾ ಮತ್ತು ಹೀನಾ ಸೇರಿ 6 ಮಂದಿ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಗೆ ಬಟ್ಟೆ ವ್ಯಾಪಾರಿ ಎಂಎಂ ಮುಜಾವರ ಅವರು 6 ಲಕ್ಷ ಸಾಲ ನೀಡಿದ್ದರು. ಈ ನಡುವೆ ಬಂಧಿತ ಆರೋಪಿಗಳು ಮುಜಾವರ್ ಗೆ ಸಾಲ ವಾಪಾಸ್ ನೀಡಿವುದಾಗಿ ಹೇಳಿ ಮನೆಗೆ ಕರೆಸಿಕೊಂಡಿದ್ದಾರೆ ನಂತರ ಮುಜಾವರ್ ರನ್ನ ಮನೆಯಲ್ಲಿ ಕೂಡಿ ಹಾಕಿ ನಗ್ನಗೊಳಿಸಿ ವಿಡಿಯೋ ಮಾಡಿದ್ದರು.

ಇದಾದ ಬಳಿಕ 5 ಲಕ್ಷ ಹಣ ನೀಡದಿದ್ದರೇ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಕೇಸ್ ದಾಖಲಿಸುವುದಾಗಿ ಮುಜಾವರ್ ಗೆ ಆರೋಪಿಗಳು ಬೆದರಿಕೆ ಹಾಕಿದ್ದರು. ಈ ನಡುವೆ ಹಣ ತಂದು ಕೊಡುವುದಾಗಿ ಹೇಳಿ ಅಲ್ಲಿಂದ ತಪ್ಪಿಸಿಕೊಂಡು ಬಂದ ಮುಜಾವರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎನ್ನಲಾಗಿದೆ.

ಇದೀಗ ಮಾಳಮಾರುತಿ ಠಾಣಾ ಪೊಲೀಸರು ಇಬ್ಬರು ಮಹಿಳೆಯರು ಸೇರಿ 6 ಮಂದಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

Key words: belgavi-fraud- Loans- threat-6 Arrest