ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಕೇಸ್ : ಮತ್ತೆ ಮೂವರು ಆರೋಪಿಗಳ ಬಂಧನ.

ಬೆಳಗಾವಿ,ಡಿಸೆಂಬರ್,16,20239(www.justkannada.in): ಬೆಳಗಾವಿಯ ವಂಟಮರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ  ಇದೀಗ  ಮತ್ತೆ ಮೂವರು ಆರೋಪಿಗಳನ್ನ ಕಾಕತಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಲಕ್ಕಪ್ಪ ನಾಯಕ್, ಲಕ್ಕವ್ವ ಎಲ್ಲಪ್ಪ ನಾಯಕ್, ಹಾಗೂ ಶೋಭಾ ರಾಜಪ್ಪ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಮಹಿಳೆ ಮೇಲೆ ಹಲ್ಲೆ ಪ್ರಕರಣದಲ್ಲಿ ಸಂಬಂಧಿಸಿದಂತೆ ಈವರಿಗೆ 11 ಆರೋಪಿಗಳನ್ನು ಬಂದಿಸಲಾಗಿದೆ. ಒಟ್ಟು 12 ಆರೋಪಿಗಳ ವಿರುದ್ಧ ಕಾಕತಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.

ಇದೀಗ 12 ಆರೋಪಿಗಳ ಪೈಕಿ 11 ಆರೋಪಿಗಳನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ ಓರ್ವ ಆರೋಪಿಗಾಗಿ ಪೊಲೀಸರಿಂದ ಶೋಧ ಮುಂದುವರೆದಿದೆ ಎನ್ನಲಾಗಿದೆ.

Key words: Belgaum-Woman – assault –case -Three – accused- arrested.