ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ತೆರೆ: 17 ಬಿಲ್‌ ಗಳು ಅಂಗೀಕಾರ- ಸ್ಪೀಕರ್ ಯು.ಟಿ ಖಾದರ್.

ಬೆಳಗಾವಿ, ಡಿಸೆಂಬರ್ 15,2023(www.justkannada.in): ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನಕ್ಕೆ ಇಂದು ತೆರೆ ಬಿದ್ದಿದ್ದು, 17ಬಿಲ್ ಗಳು ಅಂಗೀಕಾರವಾಗಿವೆ.

ಡಿಸೆಂಬರ್ 4ರಿಂದ ಆರಂಭವಾಗಿದ್ದ ಬೆಳಗಾವಿಯ ಚಳಿಗಾಲದ ಅಧಿವೇಶನ ಇಂದು ಮುಕ್ತಾಯಗೊಂಡಿದ್ದು, ವಿಧಾನಸಭೆ ಸ್ಪೀಕರ್ ಯು. ಟಿ ಖಾದರ್​  ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಈ ಬಾರಿ ದೀರ್ಘಾವಧಿ ಚರ್ಚೆಯಾಗಿದ್ದು, 17 ಬಿಲ್‌ ಗಳನ್ನ ಅಂಗೀಕರಿಸಲಾಗಿದೆ. ಇನ್ನು 150 ಗಮನ ಸೆಳೆಯುವ ಸೂಚನೆಗೆ ಚರ್ಚೆಯಾಗಿದ್ದು, ಅಧಿವೇಶನ ಅತ್ಯಂತ ಸಂತೋಷ‌ ತಂದಿದೆ ಎಂದು ಯು.ಟಿ ಖಾದರ್ ಹೇಳಿದ್ದಾರೆ.

ಈ ಬಾರಿಯ ವಿಧಾನ ಸಭಾ ಕಲಾಪದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತಾಗಿ ವಿಶೇಷ ಚರ್ಚೆಯಾಗಿದ್ದು, 42 ಶಾಸಕರು 11 ಗಂಟೆ 04 ನಿಮಿಷಗಳ ಕಾಲ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ಮಾತನಾಡಿದ್ದಾರೆ. ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಹನ್ನೊಂದು ಗಂಟೆ ಹನ್ನೊಂದು ನಿಮಿಷಗಳ ಕಾಲ ಚರ್ಚೆಯಾಗಿದ್ದು,. ಸಿಎಂ ಉತ್ತರವನ್ನೂ ಸಹ ಕೊಟ್ಟಿದ್ದಾರೆ, ಇನ್ನು ಪ್ರಮುಖವಾಗಿ ಎರಡು ದಿನ ಬರಗಾಲದ‌ ಮೇಲೆ ಚರ್ಚೆಯಾಗಿದ್ದು, ಇದಕ್ಕೆ ಕಂದಾಯ ಸಚಿವ ಕೃಷ್ಣಬೈರೇಗೌಡ ಉತ್ತರ ಕೊಟ್ಟಿದ್ದಾರೆ ಎಂದು ಸ್ಪೀಕರ್ ಯುಟಿ ಖಾದರ್ ತಿಳಿಸಿದರು.

Key words: Belgaum- winter –session- 17 bills- passed- Speaker -UT Khader.