Sunday, September 20, 2026

BDA Apartments

ಶೆಟ್ಟರ್ ಸ್ಪರ್ಧೆ: ಹರಕೆಯ ಕುರಿ ಎಂದು ಟೀಕಿಸಿದ ಲಕ್ಷ್ಮಣ್ ಸವದಿ BDA JK_Adv BDA Adv
Home Front Page ಶೆಟ್ಟರ್ ಸ್ಪರ್ಧೆ:  ಹರಕೆಯ ಕುರಿ ಎಂದು ಟೀಕಿಸಿದ ಲಕ್ಷ್ಮಣ್ ಸವದಿ.

ಶೆಟ್ಟರ್ ಸ್ಪರ್ಧೆ:  ಹರಕೆಯ ಕುರಿ ಎಂದು ಟೀಕಿಸಿದ ಲಕ್ಷ್ಮಣ್ ಸವದಿ.

ಬೆಳಗಾವಿ,ಮಾರ್ಚ್,26,2024, (www.justkannada.in):  ಬೆಳಗಾವಿಯಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ , ಹರಕೆಯ ಕುರಿ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಲಕ್ಷ್ಮಣ್ ಸವದಿ,  ಜಗದೀಶ್ ಶೆಟ್ಟರ್ ಪಕ್ಷ  ಬಿಟ್ಟು ಹೋಗಿದ್ದರು ಎನ್ನುವ ಕೋಪವಿದೆ. ಹೀಗಾಗಿ ಸ್ವಾಭಿಮಾನದ ಸುಳಿಯಲ್ಲಿ ಸಿಲುಕಿ ಸೋಲಲಿ ಎನ್ನುವ ವ್ಯವಸ್ಥೆ ಮಾಡಲಾಗುತ್ತಿದೆ. ಶೆಟ್ಟರ್ ಸ್ಪರ್ಧೆಗಿಳಿಸಿ ಹರಕೆ ಕುರಿ ಮಾಡಲು ಹೊರಟಿದ್ದಾರೆ. ಬಿಜೆಪಿಯಲ್ಲಿ ಕೆಲವರನ್ನ ಮೂಲೆಗುಂಪು ಮಾಡುವ ವ್ಯವಸ್ಥೆ ಇದೆ.  ಪ್ರಾಮಾಣಿಕವಾಗಿ ಕೆಲಸ ಮಾಡತ್ತಿದ್ದ ಸಂಗಣ್ಣ ಕರಡಿಗೆ ಟಿಕೆಟ್ ಕೊಟ್ಟಿಲ್ಲ. ಜನರಿಗೆ ವಂಚನೆ ಮಾಡುವವರನ್ನ ಅಭ್ಯರ್ಥಿ ಮಾಡಿದ್ದಾರೆ ಎಂದು ಲೇವಡಿ ಮಾಡಿದರು.ಶೆಟ್ಟರ್ ಸ್ಪರ್ಧೆ laxman savadi

ಶೆಟ್ಟರ್ ಗೂ ಬೆಳಗಾವಿಗೂ ಏನ್ ಸಂಬಂಧ. ಜೋಶಿಯನ್ನ ರಾಜ್ಯಸಭೆ ಸದಸ್ಯರನ್ನಾಗಿ ಮಾಡಬಹುದಿತ್ತು ಅಥವಾ ಶೆಟ್ಟರ್ ರನ್ನಾದ್ರೂ  ರಾಜ್ಯಸಭಾ ಸದಸ್ಯರನ್ನಾಗಿ ಮಾಡಬಹುದಿತ್ತು ಧಾರವಾಡದವರಿಗೆ ಬೆಳಗಾವಿ ಟಿಕೆಟ್ ಹೇಗೆ ಕೊಟ್ರೋ ಎಂದರು.

ಪ್ರಧಾನಿ ಮೋದಿ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ ಈಗ ಕರ್ನಾಟಕದ ಬಿಜೆಪಿಯಲ್ಲಿ ಏನು ನಡೆಯುತ್ತಿದೆ. ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಲು ಯಾರಿಗೂ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.

Key words: Belgaum, Jagadish shetter, Laxman savadi