Saturday, September 26, 2026

BDA Apartments

ಬಾಲ್ಯದ ಗೆಳೆಯನ ಅಕಾಲಿಕ ನಿಧನಕ್ಕೆ ಸಚಿವ ರಮೇಶ್ ಜಾರಕಿಹೊಳಿ ಸಂತಾಪ BDA JK_Adv BDA Adv
Home Front Page ಬಾಲ್ಯದ ಗೆಳೆಯನ ಅಕಾಲಿಕ ನಿಧನಕ್ಕೆ ಸಚಿವ ರಮೇಶ್ ಜಾರಕಿಹೊಳಿ ಸಂತಾಪ

ಬಾಲ್ಯದ ಗೆಳೆಯನ ಅಕಾಲಿಕ ನಿಧನಕ್ಕೆ ಸಚಿವ ರಮೇಶ್ ಜಾರಕಿಹೊಳಿ ಸಂತಾಪ

 

ಬೆಳಗಾವಿ, ಆ.09, 2020 : (www.justkannada.in news) ಗೋಕಾಕ್ ನಗರಸಭೆಯ ಸದಸ್ಯ ಶೇಖ್ ಫತೇವುಲ್ಲಾ ಕೋತ್ವಾಲ್ ನಿಧನ.

ಬಾಲ್ಯದ ಗೆಳೆಯನ ಅಕಾಲಿಕ ಮರಣದಿಂದ ನಾನು ದಿಗ್ಭ್ರಮೆಗೊಂಡಿದ್ದೇನೆ ಎಂದು ಸಚಿವ ರಮೇಶ್ ಜಾರಕಿಹೊಳಿ ಕಂಬನಿ ಮಿಡಿದಿದ್ದಾರೆ.
ನನ್ನ ಬಾಲ್ಯದ ಗೆಳೆಯನಾಗಿದ್ದ ಕೋತ್ವಾಲ್, ನನ್ನ ರಾಜಕೀಯ ಪ್ರಗತಿಯಲ್ಲಿ ಹೆಜ್ಜೆ ಹೆಜ್ಜೆಗೂ ನನ್ನೊಂದಿಗೆ ನಿಂತು ಜಯಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು. ಗೋಕಾಕ್ ನಗರಸಭೆಗೆ ಸತತ ಆರನೇ ಬಾರಿ ಆಯ್ಕೆ ಯಾಗಿದ್ದರು ಮತ್ತು ನಗರಸಭೆಯ ಅಧ್ಯಕ್ಷರಾಗಿ ನಗರದ ಅಭಿವೃದ್ಧಿಗೆ ಕಾರಣಕರ್ತರಾಗಿದ್ದರು.

belagavi-minister-ramesh-jarakoholi-muslim-friend-dead

ಜಾತ್ಯಾತೀತ ವ್ಯಕ್ತಿಯಾಗಿದ್ದ ಕೋತ್ವಾಲ್, ಗೋಕಾಕ್ ನಗರದ ಅಂಜುಮನ್ ಇಸ್ಲಾಂ ಸಮಿತಿ ಮತ್ತು ತಂಜೀಂ ಶಿಕ್ಷಣ ಸಂಸ್ಥೆ ಯ ಅಧ್ಯಕ್ಷರಾಗಿ, ಊರದೇವತೆಯಾದ ಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವ ಆಚರಣೆ ಯ ಸಮಿತಿ ಸದಸ್ಯರಾಗಿ ಜಾತ್ರೆಯನ್ನು ಯಶಸ್ವಿಗೊಳಿಸುತ್ತಿದ್ದರು. ಭಾ.ಜ.ಪ.ದ‌ ಬಗ್ಗೆ ಅಲ್ಪಸಂಖ್ಯಾತ ಸಮುದಾಯದಲ್ಲಿ ವಿಶೇಷ ಪ್ರೀತಿ ಮೂಡಿಸಿ ಮುಸ್ಲಿಂ ಸಮುದಾಯದ ಮತದಾರರು ಬಿಜೆಪಿಗೆ ಬೆಂಬಲ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದಾಗ ನನ್ನೊಂದಿಗೆ ನಿಂತು, ಜನಜಾಗೃತಿ ಮೂಡಿಸಿದ್ದ ಕೋತ್ವಾಲ್, ಅವಿರತವಾಗಿ ಕೊರೋನಾ ಹರಡುವಿಕೆಯ ವಿರುದ್ಧ ಹೋರಾಡಿದ್ದರು.

belagavi-minister-ramesh-jarakoholi-muslim-friend-dead

ಕೋತ್ವಾಲ್ ಅವರ ಆತ್ಮಕ್ಕೆ ಚಿರಶಾಂತಿ‌ ಸಿಗಲಿ ಮತ್ತು ಅವರ ಕುಟುಂಬದ ಸದಸ್ಯರಿಗೆ, ಅವರ ಅಭಿಮಾನಿಗಳಿಗೆ ಅಗಲಿಕೆಯ ಶೋಕ‌ ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ಪ್ರಕಟಣೆಯಲ್ಲಿ ಸಂತಾಪ ಸೂಚಿಸಿದ್ದಾರೆ.

ooo

key words : belagavi-minister-ramesh-jarakoholi-muslim-friend-dead