ತೆರೆ ಮೇಲೆ ನೋಡಿ ‘ದಾದಾ’ ಆರ್ಭಟ ! ಸೌರವ್ ಪಾತ್ರದಲ್ಲಿ ರಣ್’ಬೀರ್ ?!

ಬೆಂಗಳೂರು, ಜುಲೈ 15, 2021 (www.justkannada.in): ಮೈದಾನದಲ್ಲಿ ದಾದಾ ಆರ್ಭಟ ನೋಡಿದ ಅಭಿಮಾನಿಗಳೇ… ಶೀಘ್ರವೇ ತೆರೆ ಮೇಲೆಯೂ ಅವರ ಆಟ ನೋಡುವ ಅವಕಾಶ ಸಿಗಲಿದೆ.

ಹೌದು. ಬಂಗಾಳದ ‘ದಾದಾ’ ಸೌರವ್ ಗಂಗೂಲಿ ಜೀವನಚರಿತ್ರೆ ತೆರೆಮೇಲೆ ಬರಲು ಸಿದ್ಧತೆ ನಡೆಸಲಾಗಿದೆ.  ತನ್ನ ಜೀವನವನ್ನು ಸಿನಿಮಾ ಮಾಡಲು ದಾದಾ ಗಂಗೂಲಿ ಅನುಮತಿ ನೀಡಿದ್ದಾರೆ.

ಮೂಲಗಳ ಪ್ರಕಾರ ಗಂಗೂಲಿ ಪಾತ್ರದಲ್ಲಿ ನಟ ರಣ್ಬೀರ್ ಕಪೂರ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಚಿತ್ರದಲ್ಲಿ ಗಂಗೂಲಿ ಬಾಲ್ಯ, ಜೀವನ, ಕ್ರಿಕೆಟ್ ಮತ್ತು ಬಿಸಿಸಿಐ ಅಧ್ಯಕ್ಷರಾಗುವವರೆಗಿನ ಜೀವನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲಿದೆ. ಈಗಾಗಲೇ ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿವೆ.