ಸಪ್ಲೇಯರ್ ಮೇಲೆ ನಟ ದರ್ಶನ್ ಹಲ್ಲೆ ಆರೋಪ:  ಹೋಟೆಲ್ ನಲ್ಲಿ ನಡೆದ ಗಲಾಟೆ ಬಗ್ಗೆ ಸ್ಪಷ್ಟನೆ ನೀಡಿದ ಸಂದೇಶ್ ನಾಗರಾಜ್ ಪುತ್ರ.

ಮೈಸೂರು,ಜುಲೈ,15,2021(www.justkannada.in):  ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್ ನಲ್ಲಿ ಸಪ್ಲೇಯರ್ ಮೇಲೆ ನಟ ದರ್ಶನ್ ಹಾಗೂ ಸ್ನೇಹಿತರು ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ದೂರು ನೀಡಿರುವ ವಿಚಾರ ಕುರಿತು ಹೋಟೆಲ್ ಮಾಲೀಕ ಸಂದೇಶ್ ನಾಗರಾಜ್ ಪುತ್ರ ಪ್ರತಿಕ್ರಿಯಿಸಿದ್ದಾರೆ.jk

ಈ ಕುರಿತು ಮೈಸೂರಿನಲ್ಲಿ ಮಾತನಾಡಿ ಹಲ್ಲೆ ಘಟನೆ ಬಗ್ಗೆ ಸ್ಪಷ್ಟನೆ ನೀಡಿರುವ ಸಂದೇಶ್ ನಾಗರಾಜ್ ಪುತ್ರ, ಹೋಟೆಲ್ ನಡೆಸುತ್ತಿರುವುದು ನಾನು. ಈ ಘಟನೆ ಬಗ್ಗೆ ನಮ್ಮ ತಂದೆಗೆ ಗೊತ್ತಿಲ್ಲ. ನಮ್ಮ ಹೋಟೆಲ್ ನಲ್ಲಿ ಕೊರೋನಾ ಸೋಂಕಿನ ಪ್ರಕರಣಕ್ಕೂ ಮುನ್ನವೇ ಸಣ್ಣದಾಗಿ ಘಟನೆ ನಡೆದಿತ್ತು. ನಟ ದರ್ಶನ್ ನಮ್ಮ ಹೋಟೆಲ್ ಸಿಬ್ಬಂದಿಯನ್ನು ಬೈದಿದ್ದು ನಿಜ. ಹಲ್ಲೆ ಮಾಡಿಲ್ಲ. ಕಾರ್ಮಿಕರಿಗೆ ಹೊಡೆದಿಲ್ಲ ಎಂದು ತಿಳಿಸಿದ್ದಾರೆ,

ನನಗೆ ಅನ್ನ ಕೊಡುತ್ತಿರುವುದು ನನ್ನ ಕಾರ್ಮಿಕರೇ ಅವರ ಮೇಲೆ ಹಲ್ಲೆಯಾದ್ರೆ ಸುಮ್ಮನಿರುತ್ತೀನಾ..?   ಹೋಟೆಲ್ ಗಳಲ್ಲಿ ಇತರದ್ದು ಸಣ್ಣಪುಟ್ಟ ಘಟನೆಗಳು ಆಗುತ್ತವೆ. ಗಲಾಟೆ ನಡೆದ ವೇಳೆ ನಾನು ಅಲ್ಲೆ ಇದ್ದೆ. ಕಾರ್ಮಿಕರಿಗೆ ಬಯ್ಯಬೇಡಿ. ಹೋಟೆಲ್ ನಲ್ಲಿ ಕೂಗಾಡಬೇಡಿ  ಎಂದು ನಟ ದರ್ಶನ್ ಗೆ ಹೇಳಿದ್ದೆ.ಬೈದಾಗ ನಾನು ಕಾರ್ಮಿಕರ ಬಳಿ ಕ್ಷಮೆ ಕೇಳಿದ್ದೇನೆ ಎಂದು ತಿಳಿಸಿದ್ದಾರೆ.

ಹೋಟೆಲ್ ಮುಚ್ಚಿ ನಾವೇ ಸಂಕಷ್ಟದಲ್ಲಿದ್ದೇವೆ. ಇಲ್ಲಿ ಗ್ರಾಹಕರು ಏನೇ ಹೇಳಿದರೂ ಕೊಡಬೇಕು.  ಅವರು ನಮ್ಮ ಕಾರ್ಮಿಕರ ಮೇಲೆ ಸ್ವಲ್ಪ ಬೈದಾಡಿದ್ದಾರೆ. ದಯವಿಟ್ಟು ಇದನ್ನ ಇಲ್ಲಿಗೆ ಬಿಟ್ಟುಬಿಡಿ. ಅವರು ಪಬ್ಲಿಸಿಟಿಗೋಸ್ಕರ ಏನೇನೋ ಮಾಡುತ್ತಿದ್ದಾರೆ ಕೊರೋನಾ ನಂತ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದೇವೆ. ಕಸ್ಟಮರ್ ಬರದೇ ಬುಕ್ಕಿಂಗ್ ಇಲ್ಲದೇ ಕಷ್ಟದಲ್ಲಿದ್ದೇವೆ. ಹೀಗೆಲ್ಲಾ ವಿಷಯವನ್ನು ದೊಡ್ಡದು ಮಾಡಿ, ಹೋಟೆಲ್ ಬಗ್ಗೆಯೂ ಕೆಟ್ಟ ಹೆಸರು ತರುವ ಕೆಲಸ ಮಾಡಬೇಡಿ. ನಮ್ಮ ಸಿಬ್ಬಂದಿಯ ಮೇಲೆ ನಟ ದರ್ಶನ್ ಹಲ್ಲೆ ಮಾಡಿಲ್ಲ. ಹೀಗೆ ಮಾಡೋದಕ್ಕು ನಮ್ಮ ಸಿಬ್ಬಂದಿಯ ಮೇಲೆ ನಾವು ಬಿಟ್ಟುಕೊಡೋದು ಇಲ್ಲ. ನಿರ್ದೇಶಕ ಇಂದ್ರಜಿತ್ ಲಂಕೇಶ್ 15 ದಿನಗಳ ಹಿಂದೆ ಕೇಳಿದಾಗ ಇದೇ ವಿಚಾರವನ್ನು ಹೇಳಿದ್ದೆ. ಆದ್ರೇ ಸಿಬ್ಬಂದಿಯ ಮೇಲೆ ಹಲ್ಲೆ ಆಗೇ ಇಲ್ಲ ಎಂದು ಸ್ಪಷ್ಟ ಪಡಿಸಿದರು.

 

Key words: Actor -Darshan – assaulting –supplier-Sandesh Nagaraj – son