Friday, August 21, 2026

BDA Apartments

Home Front Page ಕ್ಯಾಪ್ಟನ್ ಕೊಹ್ಲಿ-ಕೋಚ್ ಶಾಸ್ತ್ರಿಗೆ ತರಾಟೆ ತೆಗೆದುಕೊಂಡ ಬಿಸಿಸಿಐ

ಕ್ಯಾಪ್ಟನ್ ಕೊಹ್ಲಿ-ಕೋಚ್ ಶಾಸ್ತ್ರಿಗೆ ತರಾಟೆ ತೆಗೆದುಕೊಂಡ ಬಿಸಿಸಿಐ

ಬೆಂಗಳೂರು, ಸೆಪ್ಟೆಂಬರ್ 8, 2021 (www.justkannada.in): ಟೀಂ ಇಂಡಿಯಾ ನಾಯಕ ಕೊಹ್ಲಿ ಮತ್ತು ಕೋಚ್‌ ಶಾಸ್ತ್ರಿ ಅವರನ್ನು ಬಿಸಿಸಿಐ ತರಾಟೆಗೆ ತೆಗೆದುಕೊಂಡಿದೆ.

ಕೆಲವು ದಿನಗಳ ಹಿಂದೆ ವಿರಾಟ್‌ ಕೊಹ್ಲಿ ಹಾಗೂ ಕೋಚ್‌ ರವಿ ಶಾಸ್ತ್ರಿ ಲಂಡನ್‌ನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು.

ಇದಕ್ಕಾಗಿ ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿಯಿಂದ ಅನುಮತಿ ಪಡೆದಿರಲಿಲ್ಲ. ಪರಿಣಾಮ ರವಿಶಾಸ್ತ್ರಿ ಕೊರೊನಾ ಸೋಂಕು ತಗುಲಿದೆ ಎಂದು ತಿಳಿದು ಬಂದಿದೆ. ಇದಕ್ಕಾಗಿ ಬಿಸಿಸಿಐ ಈ ಇಬ್ಬರನ್ನು ತರಾಟೆಗೆ ತೆಗೆದುಕೊಂಡಿದೆ.

ಕೊರೊನಾ ನಿಯಮವನ್ನು ಉಲ್ಲಂಘಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ವಿವರಣೆ ಕೇಳಿದೆ. ಯಾವುದೇ ಕಾರಣಕ್ಕೂ ಹೊರಗೆ ಓಡಾಡದಂತೆ ಆಟಗಾರರಿಗೆ ತಾಕೀತು ಮಾಡಿದೆ.

key words: bcci ask clarification to kohli and ravi shastri