Friday, September 18, 2026

BDA Apartments

Home Front Page ಬಿಬಿಎಂಪಿ ಅಂದ್ರೆ ಭ್ರಷ್ಟಾಚಾರದ ಸಂತೆ ಎಂಬ ವಾತಾವರಣವಿತ್ತು: ಇನ್ಮುಂದೆ ಅಭಿವೃದ್ಧಿ ಕಾರ್ಯ-ಸಿಎಂ ಬಿಎಸ್ ಯಡಿಯೂರಪ್ಪ…

ಬಿಬಿಎಂಪಿ ಅಂದ್ರೆ ಭ್ರಷ್ಟಾಚಾರದ ಸಂತೆ ಎಂಬ ವಾತಾವರಣವಿತ್ತು: ಇನ್ಮುಂದೆ ಅಭಿವೃದ್ಧಿ ಕಾರ್ಯ-ಸಿಎಂ ಬಿಎಸ್ ಯಡಿಯೂರಪ್ಪ…

ಬೆಂಗಳೂರು,ಅ,2,2019(www.justkannada.in):  ಬಿಬಿಎಂಪಿ ಎಂದರೆ ಜನರಲ್ಲಿ ಭ್ರಷ್ಟಾಚಾರ ಸಂತೆ ಎಂಬ ವಾತಾವರಣವಿತ್ತು. ಇನ್ಮುಂದೆ ಅಭಿವೃದ್ಧಿ ಕಾರ್ಯಗಳು ನಡೆಯುವಂತೆ ನೋಡಿಕೊಳ್ಳುತ್ತೇವೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಬಿಬಿಎಂಪಿಯ ನೂತನ ಮೇಯರ್ ಆಗಿ ಆಯ್ಕೆಯಾದ  ಗೌತಮ್ ಕುಮಾರ್ ಜೈನ್ ಹಾಗೂ ಉಪಮೇಯರ್ ಆಗಿ ಆಯ್ಕೆಯಾದ ರಾಮ್ ಮೋಹನ್ ರಾಜುಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದರು.

ಬಳಿಕ  ಮಾತನಾಡಿದ ಸಿಎಂ ಬಿ.ಎಸ್. ಯಡಿಯೂರಪ್ಪ,  ಬಿಬಿಎಂಪಿಯಲ್ಲಿ ಬಿಜೆಪಿಯಿಂದ ಮೇಯರ್, ಉಪಮೇಯರ್ ಆಗಿದ್ದು, ಅಭಿವೃದ್ಧಿ ಕಾರ್ಯಗಳು ನಡೆಯುವಂತೆ ನೋಡಿಕೊಳ್ಳುತ್ತೇವೆ. ಬಿಬಿಎಂಪಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.

ಹಾಗೆಯೇ ಹಿಂದೆ ನಡೆದಿರುವ ಹಗರಣಗಳನ್ನ ಬಹಿರಂಗ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುತ್ತೇವೆ ಎಂದು ಸಿಎಂ ಬಿ.,ಎಸ್ ಯಡಿಯೂರಪ್ಪ ಹೇಳಿದರು.

Key words: BBMP -atmosphere – corruption-development -CM BS Yeddyurappa