Sunday, September 13, 2026

BDA Apartments

ನಟ ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರ ಬಸವಶ್ರೀ ಪ್ರಶಸ್ತಿ ಘೋಷಣೆ BDA JK_Adv BDA Adv
Home Cinema ನಟ ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರ ಬಸವಶ್ರೀ ಪ್ರಶಸ್ತಿ ಘೋಷಣೆ.

ನಟ ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರ ಬಸವಶ್ರೀ ಪ್ರಶಸ್ತಿ ಘೋಷಣೆ.

ಬೆಂಗಳೂರು,ನವೆಂಬರ್,4,2021(www.justkannada.in): ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ನಟ ಪವರ್ ಸ್ಟಾರ್  ಪುನೀತ್ ರಾಜ್ ಕುಮಾರ್  ಅವರಿಗೆ ಮರಣೋತ್ತರ ಬಸವಶ್ರೀ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ಈ ಬಗ್ಗೆ  ಮಾತನಾಡಿ ಮಾಹಿತಿ ನೀಡಿದ ಡಾ. ಶಿವಮೂರ್ತಿ ಮುರುಘಾ ಶರಣರು,  ನಟ ಪುನೀತ್ ರಾಜ್ ಕುಮಾರ್ ಅವರಿಗೆ 2021ನೇ ಸಾಲಿನ ಮರಣೋತ್ತರ ಬಸವಶ್ರೀ ಪ್ರಶಸ್ತಿ ನೀಡಲಾಗುತ್ತದೆ. ಬರುವ ಬಸವ ಜಯಂತಿ ದಿನದಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ತಿಳಿಸಿದರು.

ಇನ್ನು ನವೆಂಬರ್ 10ರಂದು ಬೆಂಗಳೂರಿನ ಪುನೀತ್ ರಾಜ್ ಕುಮಾರ್ ಅವರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲಾಗುವುದು ಎಂದು ಹೇಳಿದರು. ಚಿತ್ರದುರ್ಗದ  ಮುರುಘಾ ಮಠದಿಂದ  ಬಸವಶ್ರೀ ಪ್ರಶಸ್ತಿ ನೀಡಲಾಗುತ್ತಿದೆ.

Key words: Basavashree Award – Actor -Puneet Raj Kumar-muruga math