ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಕೇಸ್ ಗೆ ಬಿಗ್ ಟ್ವಿಸ್ಟ್: ಲೈಂಗಿಕ ದೌರ್ಜನ್ಯವೇ ಆಗಿಲ್ಲ ಎಂದ ಮಹಿಳೆ

ಬೆಂಗಳೂರು, ಏಪ್ರಿಲ್,13,2026 (www.justkannada.in): ಬಸವ ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ದ ಕೇಳಿ ಬಂದಿರುವ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಈ ಸಂಬಂಧ ಮಹಿಳೆಯೇ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದು ನನ್ನ ಮತ್ತು ಸ್ವಾಮೀಜಿಗಳ ಮೇಲಿನ ಎಲ್ಲಾ ಆರೋಪಗಳು ಸುಳ್ಳು.  ಲೈಂಗಿಕ ದೌರ್ಜನ್ಯವೇ ಆಗಿಲ್ಲ ಎಂದಿದ್ದಾರೆ.  ಗುರುಗಳು ನನ್ನ ಜೊತೆ ಅಸಭ್ಯವಾಗಿ ವರ್ತಿಸಿಲ್ಲ.  ನನ್ನ ಅವರ ನಡುವಿನ ಸಂಬಂಧ ಭಕ್ತೆ ಗುರುವಿನ ಸಂಬಂಧ  ಎಂದು ಸ್ಪಷ್ಟಪಡಿಸಿದ್ದಾರೆ.

ನಾನು ಸ್ವಾಮೀಜಿ ವಿರುದ್ದ ಯಾವುದೇ ದೂರು ನೀಡಿಲ್ಲ . ನನ್ನ ಹೆಸರಲ್ಲಿ ಯಾರೂ ದೂರು ನೀಡಿದ್ದಾರೆ. ಸ್ವಾಮೀಜಿ ಬಳಿ ನಾವು ಯಾವುದೇ ಹಣಕ್ಕೆ ಡಿಮ್ಯಾಂಡ್ ಮಾಡಿಲ್ಲ. ಹಣ ಕೇಳುವ ಪರಿಸ್ಥಿತಿ ನಮಗೆ ಬಂದಿಲ್ಲ.  4 ದಿನದಲ್ಲಿ ಎಲ್ಲವನ್ನೂ ವಿವರಿಸುತ್ತೇನೆ ಎಂದು ಮಹಿಳೆ ವಿಡಿಯೋ ಮೂಲಕ ತಿಳಿಸಿದ್ದಾರೆ.

Key words: Big twist, Basavajaya Mrityunjaya Swamiji case