Friday, October 16, 2026

Dasara Wishes

ನೆರೆ ಪರಿಹಾರ ವಿಳಂಬ ಹಿನ್ನೆಲೆ: ವಿಷ ಸೇವಿಸಿ ರೈತ ಆತ್ಮಹತ್ಯೆಗೆ ಶರಣು… DasraWishes_JK...
Happy Dasara
Home Front Page ಮುಂದಿನ ದಿನಗಳಲ್ಲಿ ಸಮಸ್ಯೆ ಸಾಧ್ಯತೆ: ಇತಿಮಿತಿಯಲ್ಲಿ ಸಿಲಿಂಡರ್ ಬಳಸಿ- ಸಚಿವ ಕೆ.ಎಚ್ ಮುನಿಯಪ್ಪ

ಮುಂದಿನ ದಿನಗಳಲ್ಲಿ ಸಮಸ್ಯೆ ಸಾಧ್ಯತೆ: ಇತಿಮಿತಿಯಲ್ಲಿ ಸಿಲಿಂಡರ್ ಬಳಸಿ- ಸಚಿವ ಕೆ.ಎಚ್ ಮುನಿಯಪ್ಪ

ಬೆಂಗಳೂರು,ಏಪ್ರಿಲ್,13,2026 (www.justkannada.in): ಗ್ಯಾಸ್ ಸಿಲಿಂಡರ್ ಗೆ ಮುಂದಿನ ದಿನಗಳಲ್ಲಿ ಸಮಸ್ಯೆಯಾಗುವ ಸಾಧ್ಯತೆ ಇದೆ. ಹೀಗಾಗಿ ಜನರು ಇತಿಮಿತಿಯಲ್ಲಿ ಸಿಲಿಂಡರ್ ಬಳಸಬೇಕು ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಮನವಿ ಮಾಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೆ.ಎಚ್ ಮುನಿಯಪ್ಪ, ಗ್ಯಾಸ್ ಸಿಲಿಂಡರ್ ಕೇಂದ್ರದ ವ್ಯಾಪ್ತಿಗೆ ಬರುತ್ತೆ. ನಮ್ಮದೇನಿದ್ದರೂ ಸಿಲಿಂಡರ್ ವಿತರಣೆ ಮಾಡುವುದಷ್ಟೆ. ಮುಂದಿನ ದಿನಗಳಲ್ಲಿ ಸಮಸ್ಯೆ ಆಗುವ ಸಾಧ್ಯತೆ ಇದೆ. ಜನರು ಇತಿಮಿತಿಯಲ್ಲಿ ಸಿಲಿಂಡರ್ ಬಳಸಬೇಕು ಎಂದರು.

ಹಿರಿಯ ಶಾಸಕರು ದೆಹಲಿ ಪ್ರವಾಸ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಕೆ.ಎಚ್ ಮುನಿಯಪ್ಪ, ಸಚಿವ ಸ್ಥಾನ ಕೇಳಲು ಅವರಿಗೆ ಅಧಿಕಾರ ಇದೆ. ಸಚಿವ ಸ್ಥಾನದ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ.  ಏನೇ ತೀರ್ಮಾನ ತೆಗೆದುಕೊಂಡರೂ ನಾವು ಬದ್ದ ಎಂದು ತಿಳಿಸಿದರು.

Key words: Use, cylinders, within, limits, Minister, K.H. Muniyappa