Sunday, September 20, 2026

BDA Apartments

ಬಸವ ಕಲ್ಯಾಣ ಉಪಚುನಾವಣೆಗೆ ಸಜ್ಜು: ಬಿಜೆಪಿಯಿಂದ ಮೂವರು ಉಸ್ತವಾರಿಗಳ ನೇಮಕ… BDA...
Home Front Page ಬಸವ ಕಲ್ಯಾಣ ಉಪಚುನಾವಣೆಗೆ ಸಜ್ಜು: ಬಿಜೆಪಿಯಿಂದ ಮೂವರು ಉಸ್ತವಾರಿಗಳ ನೇಮಕ…

ಬಸವ ಕಲ್ಯಾಣ ಉಪಚುನಾವಣೆಗೆ ಸಜ್ಜು: ಬಿಜೆಪಿಯಿಂದ ಮೂವರು ಉಸ್ತವಾರಿಗಳ ನೇಮಕ…

ಬೀದರ್,ನವೆಂಬರ್,21,2020(www.justkannada.in):  ಶಿರಾ ಮತ್ತು ಆರ್.ಆರ್ ನಗರ ಉಪಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ಬಳಿಕ ಇದೀಗ ಬಸವಕಲ್ಯಾಣದಲ್ಲಿ ಕಮಲ ಅರಳಿಸಲು ಬಿಜೆಪಿ ನಾಯಕರು ಸಜ್ಜಾಗಿದ್ದಾರೆ.kannada-journalist-media-fourth-estate-under-loss

ಬಸವ ಕಲ್ಯಾಣ ಉಪಚುನಾವಣೆ ಹಿನ್ನೆಲೆ ಬಿಜೆಪಿಯಿಂದ ಮೂವರನ್ನ ಉಸ್ತುವಾರಿಗಳಾಗಿ ನೇಮಕ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.  ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ, ಡಿಸಿಎಂ ಲಕ್ಷ್ಮಣ್ ಸವದಿ ಮತ್ತು ಬೀದರ್ ಸಂಸದ ಭಗವಂತ ಖೂಬಾ ಅವರನ್ನ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ.

ಮಸ್ಕಿ, ಬಸವಕಲ್ಯಾಣ ಉಪಚುನಾವಣೆಗಳಿಗೆ ಈಗಿನಿಂದಲೇ ಅಖಾಡ ಸಿದ್ಧವಾಗ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಆರಂಭದಿಂದಲೇ ತಾಲೀಮು ನಡೆಸಲು ಶುರು ಮಾಡಿದೆ.

Key words:  Basava kalyana-by-election- Appointment -three –BJP-incharge