ನನ್ನ ಜೀವ ಹೋದರೇ ಅದಕ್ಕೆ ಬಸನಗೌಡ ಪಾಟೀಲ್  ಯತ್ನಾಳ್ ಕಾರಣ-ಫೇಸ್ ಬುಕ್ ನಲ್ಲಿ ಯುವಕನಿಂದ ಪೋಸ್ಟ್..

ವಿಜಯಪುರ,ನ,3,2019(www.justkannada.in): ನನ್ನ ಜೀವ ಹೋದ್ರೆ ಅದಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾರಣ ಎಂದು ವ್ಯಕ್ತಿಯೊಬ್ಬ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅಪ್ಪು ಪಟ್ಟಣದ ಶೆಟ್ಟಿ ಬೆಂಬಲಿಗನಾಗಿರುವ ಬಾಬು ಜಗದಾಳೆ ಎಂಬ ಯುವಕ ನಿನ್ನೆ ರಾತ್ರಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, ನನ್ನ ಜೀವ ಹೋದ್ರೆ ಅದಕ್ಕೆ ಬಸವನಗೌಡ ಪಾಟೀಲ್ ಯತ್ನಾಳ್ ಹಾಗೂ ಪಿಎಸ್ ಐ ಶರಣಗೌಡ ಕಾರಣವೆಂದು ಹೇಳಿದ್ದಾನೆ. ನಿನಗೆ ಆಕ್ಸಿಡೆಂಟ್ ಮಾಡೋ ಪ್ಲಾನ್ ನಲ್ಲಿದ್ದಾರೆ. ನಿನ್ನ ಹೆಣ ಎತ್ತಿಕೊಂಡು ಪ್ರತಿಭಟನೆ ಮಾಡುತ್ತಾರೆ ಎಂದು ಪಿಎಸ್ ಐ ಶರಣಗೌಡ ಹೇಳಿದ್ದಾರೆ ಎಂದು ಬಾಬುಜಗದಾಳೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾನೆ.

ಅಲ್ಲದೆ ಬಸನಗೌಡ ಪಾಟೀಲ್ ಯತ್ನಾಳ್ ಕೇಸ್ ನಲ್ಲಿ ಹುಚ್ಚುನಾಯಿಗೆ ಹೊಡೆದಂತೆ ಹೊಡೆದಿದ್ದಾರೆ ಎಂದು ಯುವಕ ಬಾಬು ಜಗದಾಳೆ ತನ್ನ ಅಳಲು ತೋಡಿಕೊಂಡಿದ್ದಾನೆ.

Key words: Basanagowda Patil Yatnal- Ththreat-facebook-Post -young man