Thursday, August 20, 2026

BDA Apartments

Home Front Page ಮಸ್ಕಿ ಬೈ ಎಲೆಕ್ಷನ್: ‘ಆಪರೇಷನ್ ಪಾಸ್’, ಕ್ಯಾಂಡಿಡೇಟ್ ಫೇಲ್ !

ಮಸ್ಕಿ ಬೈ ಎಲೆಕ್ಷನ್: ‘ಆಪರೇಷನ್ ಪಾಸ್’, ಕ್ಯಾಂಡಿಡೇಟ್ ಫೇಲ್ !

ರಾಯಚೂರು, ಮೇ 02, 2021 (www.justkannada.in):: ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ 19942 ಮತ ಗಳಿಸಿ ಸೋಲಿನ ಹಾದಿಯಲ್ಲಿದ್ದಾರೆ.

ಕಳೆದ ಬಾರಿ ಕಾಂಗ್ರೆಸ್ ನಿಂದ ಗೆದ್ದಿದ್ದ ಪ್ರತಾಪಗೌಡ ಕೈ ಪಕ್ಷ ತೊರೆದು ಕಮಲ ಪಾಳಯ ಸೇರಿದ್ದರು. ಆದರೆ ಕ್ಷೇತ್ರದ ಮತದಾರರು ಆಪರೇಷನ್ ಗೆ ಮಣೆ ಹಾಕದೇ ಕೈ ಹಿಡಿದಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಬಸವಗೌಡ ತುರವಿಹಾಳ ಗೆಲುವಿನತ್ತ ದಾಪುಗಾಲು ಇಡುತ್ತಿದ್ದಾರೆ. ಮತಎಣಿಕೆಯಲ್ಲಿ ಸದ್ಯ 15,000 ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸವಗೌಡ ತುರವಿಹಾಳ ಮುನ್ನಡೆ ಸಾಧಿಸುತ್ತಿದ್ದಾರೆ.

ಬಸವಗೌಡ ತುರವಿಹಾಳ 29336 ಮತಗಳನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಭಾರೀ ಅಂತರವನ್ನು ಕಾಂಗ್ರೆಸ್ ಅಭ್ಯರ್ಥಿ ಪಡೆದುಕೊಂಡಿದ್ದಾರೆ.

ಕಳೆದ ಬಾರಿಯ ಚುನಾವಣೆಯಲ್ಲಿ ಸುಮಾರು 200 ಮತಗಳ ಅಂತರದಲ್ಲಿ ಪ್ರತಾಪಗೌಡ ಪಾಟೀಲ್ ಗೆಲವು ಸಾಧಿಸಿದ್ದರು. ಆದರೆ ಈ ಬಾರಿ ಭಾರೀ ಅಂತರದಲ್ಲಿ ಸೋಲನ್ನು ಅನುಭವಿಸುವುದು ಖಚಿತವಾಗಿದೆ.