Wednesday, August 12, 2026

BDA Apartments

Home Front Page ಮಂಗಳಮುಖಿಯನ್ನು ಪ್ರೀತಿಸಿ ವಿವಾಹವಾಗಿ, 6 ತಿಂಗಳ ಬಳಿಕ ಪರಾರಿಯಾದ ಯುವಕ

ಮಂಗಳಮುಖಿಯನ್ನು ಪ್ರೀತಿಸಿ ವಿವಾಹವಾಗಿ, 6 ತಿಂಗಳ ಬಳಿಕ ಪರಾರಿಯಾದ ಯುವಕ

ಬೆಂಗಳೂರು:ಜೂ-1:(www.justkannada.in) ಮಂಗಳಮುಖಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಿ 6 ತಿಂಗಳ ಕಾಲ ಸಹಜೀವನ ನಡೆಸಿದ್ದ ವ್ಯಕ್ತಿಯೊಬ್ಬಇದೀಗ ಕೈಕೊಟ್ಟು ಪರಾರಿಯಗೈರುವ ಘಟನೆ ಬೆಂಗಳುರಿನಲ್ಲಿ ನಡೆದಿದೆ.

ಈ ಕುರಿತು ಪತಿಯ ವಿರುದ್ಧ ಸಂತ್ರಸ್ತ ತೃತೀಯ ಲಿಂಗಿ ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪೊಲೀಸರು ಪ್ರಿಯಕರನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

8ನೇ ಮೈಲು ಬಳಿಯಲ್ಲಿ ವಾಸವಾಗಿದ್ದ ತೃತೀಯ ಲಿಂಗಿ ನಕ್ಷತ್ರ ಎಂಬುವರನ್ನು ತೇಜಸ್‌ ಎಂಬಾತ ಪ್ರೀತಿಸಿ ಹಿಂದು ಸಂಪ್ರದಾಯದಂತೆ ಅಕ್ಕಪಕ್ಕದ ನಿವಾಸಿಗಳು, ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾಗಿದ್ದ. ಬಳಿಕ ಆರು ತಿಂಗಳು ಸಂಸಾರವನ್ನು ನಡೆಸಿದ್ದಾನೆ. ಆದರೆ, ಆತ ತನ್ನ ಪಾಲಕರು ಮತ್ತು ಸ್ನೇಹಿತರಿಗೆ ವಿಚಾರ ತಿಳಿಸಿರಲಿಲ್ಲ ತೃತಿಯ ಲಿಂಗಿಯಿಂದ 1 ಲಕ್ಷದ ಎಂಬತ್ತು ಸಾವಿರ ರೂ., ಮೊಬೈಲ್‌ ಮತ್ತು ಚಿನ್ನದ ಉಂಗುರಗಳನ್ನು ಪಡೆದುಕೊಂಡಿದ್ದಾನೆ.

ಕೆಲ ತಿಂಗಳ ಬಳಿಕ ತೇಜಸ್ ಸುಶ್ಮಿತಾ ಎಂಬ ಯುವತಿಯೊಂದಿಗೆ ಸ್ನೇಹಬೆಳಸಿ, ತೃತೀಯ ಲಿಂಗಿಯಿಂದ ದೂರಾಗಲು ಯತ್ನಿಸಿದ್ದಾನೆ. ಅಲ್ಲದೇ ನೀನು ಸ್ತ್ರೀ ಅಲ್ಲ, ಲಿಂಗ ಪರಿವರ್ತಿತ ಮಹಿಳೆ ಎಂದು ಬೈದು ಮನೆ ಖಾಲಿ ಮಾಡುವಂತೆ ತಿಳಿಸಿದ್ದಾನೆ. ಇಲ್ಲವಾದಲ್ಲಿ ಸಾಯಿಸುವುದಾಗಿ ಬೆದರಿಕೆವೊಡ್ಡಿದ್ದಾನೆ ಎಂದು ತೃತೀಯ ಲಿಂಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ್ ಅದಾಖಲಿಸಿಕೊಂಡಿರುವ ಪೊಲಿಸರು ತೇಜಸ್ ಪತ್ತೆಗೆ ಬಲೆಬೀಸಿದ್ದಾರೆ.

ಮಂಗಳಮುಖಿಯನ್ನು ಪ್ರೀತಿಸಿ ವಿವಾಹವಾಗಿ, 6 ತಿಂಗಳ ಬಳಿಕ ಪರಾರಿಯಾದ ಯುವಕ
Bangalore,transgender marriage,lover escape