ಬೆಂಗಳೂರು ಪಶ್ಚಿಮ ವಿಭಾಗ ಪೊಲೀಸರ ಕಾರ್ಯಾಚರಣೆ : ಕಳೆದ 5 ದಿನಗಳಲ್ಲಿ 15 ಡ್ರಗ್ಸ್ ಪೆಡ್ಲರ್ಸ್  ಬಂಧನ..

ಬೆಂಗಳೂರು,ಸೆಪ್ಟಂಬರ್,5,2020(www.justkannada.in):  ಬೆಂಗಳೂರಿನ ಪಶ್ಚಿಮ ವಿಭಾಗದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಕಳೆದ ಐದು ದಿನಗಳಲ್ಲಿ ಒಟ್ಟು 15 ಡ್ರಗ್ಸ್ ಪೆಡ್ಲರ್ ಗಳನ್ನ ಬಂಧಿಸಿದ್ದಾರೆ.jk-logo-justkannada-logo

ಬೆಂಗಳೂರಿನ ಪಶ್ಚಿಮ ವಿಭಾಗದ ಪೊಲೀಸರು 12 ಪ್ರಕರಣಗಳಲ್ಲಿ 15 ಮಂದಿ ಆರೋಪಿಗಳನ್ನು ಬಂಧಿಸಿ 5ಕೆಜಿ 916 ಗ್ರಾಂ ತೂಕದ  ಗಾಂಜಾ, 25,080 ರೂ ನಗದು ಹಣ, ಮೂರು ಮೊಬೈಲ್ ಗಳು ಒಂದು ಇಂಡಿಕಾ ಕಾರು ಮತ್ತು ಒಂದು ಸುಜುಕಿ ಆಕ್ಸೆಸ್ ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಇಂದು ಮಾಗಡಿ ರಸ್ತೆ ಪೊಲೀಸ್ ಠಾಣಾ  ವ್ಯಾಪ್ತಿಯ ವೆಸ್ಟ್ ಆಫ್ ಕಾರ್ಡ್ ರೋಡ್, ಪಾರ್ಕ್ ರಸ್ತೆಯ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳಾದ  ಸುನಿಲ್ ಕುಮಾರ್(37), ರಘ(27)  ಬಂಧಿಸಿ ಇವರ ಬಳಿ ಇದ್ದ 545 ಗ್ರಾಂ ತೂಕದ ಗಾಂಜಾ, 20,000/- ರೂ ನಗದು ಹಣ, ಒಂದು ಇಂಡಿಕಾ ಕಾರ್ ಮತು 3 ಮೊಬೈಲ್ ಫೋನ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹಾಗೆಯೇ ಮಾಗಡಿರಸ್ತೆ ಪೊಲೀಸ್ ಠಾಣಾ  ವ್ಯಾಪ್ತಿಯ ರಾಜಾಜಿನಗರ 5ನೇ ಬ್ಲಾಕ್, ಎಸ್.ಜೆ.ಆರ್ ಕಾಲೇಜ್ ಹಿಂಭಾಗ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಧನರಾಜ್  ನನ್ನ ದಸ್ತಗಿರಿ ಮಾಡಿ ಈತನ  ಬಳಿ ಇದ್ದ 977 ಗ್ರಾಂ ತೂಕದ ಗಾಂಜಾ, 1,560/- ರೂ ನಗದು ಹಣ ಮತ್ತು ಒಂದು ಸುಜುಕಿ ಆಕ್ಸೆಸ್ ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜ್ಞಾನಭಾರ ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆಪ್ಟಂಬರ್ 2 ರಂದು ನೈಸ್ ರಸ್ತೆಯ ರಾಮಸಂದ್ರ ಮುಖ್ಯರಸ್ತೆ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಫಹಾದ್(27) ಈತನನ್ನು  ಬಂಧಿಸಿ ಈತನ  ಬಳಿ ಇದ್ದ 800 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸೆಪ್ಟಂಬರ್ 1 ರಂದು ರಾಜರಾಜೇಶ್ವರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚನ್ನಸಂದ್ರದ ಸಂಕ್ರಾಂತಿ ಡಾಬಾ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ರವಿ  ರವಿಕುಮಾರ್ 19ವರ್ಷ ಈತನನ್ನು ದಸ್ತಗಿರಿ ಮಾಡಿ ಈತನ  ಬಳಿ ಇದ್ದ 270 ಗ್ರಾಂ ತೂಕದ ಗಾಂಜಾ ಮತ್ತು ನಗದು ಹಣ 600/-ರೂಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮತ್ತೊಂದು ಪ್ರಕರಣದಲ್ಲಿ  ಸೆಪ್ಟಂಬರ್ 4 ರಂದು ರಾಜರಾಜೇಶ್ವರಿನಗರ ಪೊಲೀಸ್ ಠಾಣಾ ಸರಹದ್ದಿನ ಬಿ.ಇ.ಎಂ.ಎಲ್. ಲೇಔಟ್, ಬಿ.ಡಿಎ. ಕಾಂಪ್ಲೆಕ್ಸ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಆರೋನ ಶರೀಫ್ ಬಿನ್ ಇಲಿಯಾಸ್ ಪಾಷ ಈತನನ್ನು ದಸ್ತಗಿರಿ ಮಾಡಿ ಈತನ ವಶದಿಂದ 620 ಗ್ರಾಂ ತೂಕದ  ಗಾಂಜಾ ವಶಪಡಿಸಿಕೊಂಡು ತನಿಖೆ ಕೈಗೊಂಡಿರುತ್ತೆ.

ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಸೆಪ್ಟಂಬರ್ 4 ರಂದು ಅಶ್ವಥಕಟ್ಟೆ ರಸ್ತೆಯ ಬಂಡೆ ಗುಡಿಸಲು ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಸಲ್ಮಾನ್ ನನ್ನ ಬಂಧಿಸಿ ಈತನ ವಶದಿಂದ 500 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ಇನ್ನು ಇಂದು ಚಾಮರಾಜಪೇಟೆ ಪೊಲೀಸ್ ಠಾಣಾ  ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಇರ್ಫನ್, ನನ್ನ ಬಂಧಿಸಿ ಈತನ ವಶದಿಂದ 450 ಗ್ರಾಂ ತೂಕದ ಗಾಂಜಾ ಹಾಗೂ 1,120/- ನಗದು ಹಣವನ್ನು ವಶಪಡಿಸಿಕೊಂಡು ತನಿಖೆ ಕೈಗೊಂಡಿರುತ್ತೆ. ಹಾಗೂ ಮತ್ತೊಂದು ಪ್ರಕರಣದಲ್ಲಿ ದಿನಾಂಕ: ಚಾಮರಾಜಪೇಟೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಇರ್ಫನ್ ಖಾನ್, 26 ವರ್ಷ ಈತನನ್ನು ದಸ್ತಗಿರಿ ಮಾಡಿ ಈತನ ವಶದಿಂದ 450 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಂಡು ತನಿಖೆ ಕೈಗೊಂಡಿರುತ್ತೆ.

ಜೆ.ಜೆ.ನಗರ  ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಸೆಪ್ಟಂಬರ್ 2ರಂದು ಹಳೇಗುಡ್ಡದಹಳ್ಳಿ, ಈದ್ಗಾ ಮೈದಾನದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳಾದ  ಮುನಿಯಾಂಡಿ, ಮುಬಾರಕ್ ಬಂಧಿಸಿ ಇವರ ಬಳಿ ಇದ್ದ 474 ಗ್ರಾಂ ತೂಕದ ಗಾಂಜಾ ಹಾಗೂ 1,500/- ನಗ ದು ಹಣವನ್ನು ಪೊಲೀಸರು  ವಶಪಡಿಸಿಕೊಂಡಿದ್ದಾರೆ.

ಬಸವೇಶ್ವರ ನಗರ  ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಸೆಪ್ಟಂಬರ್ 3 ರಂದು ನೇತಾಜಿ ಆಟದ ಮೈದಾನದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಮಂಜುನಾಥ, ದಸ್ತಗಿರಿ ಮಾಡಿ ಈತನ ವಶದಿಂದ 380 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಂಡು ತನಿಖೆ ಕೈಗೊಂಡಿರುತ್ತೆ.Bangalore -West Division- 15 drug peddlers -arrested - last 5 days.

ಕಾಟನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಬಾಳೇಕಾಯಿ ಮಂಡಿ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳಾದ  ಜ್ಯೋತಿ, ರಾಜೇಶ್ವರಿ, ಬಂಧಿಸಿ  ಇವರ ಬಳಿ ಇದ್ದ 250 ಗ್ರಾಂ ತೂಕದ ಗಾಂಜಾ ಹಾಗೂ 300/- ರೂ ನಗದನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Key words: Bangalore -West Division- 15 drug peddlers -arrested – last 5 days.