Sunday, August 23, 2026

BDA Apartments

Home Front Page ‘ಈಸಿ ಆಫ್ ಲಿವಿಂಗ್ ಇಂಡೆಕ್ಸ್’ ನಲ್ಲಿ ದೇಶದಲ್ಲೇ ಬೆಂಗಳೂರಿಗೆ ಅಗ್ರಸ್ಥಾನ….

‘ಈಸಿ ಆಫ್ ಲಿವಿಂಗ್ ಇಂಡೆಕ್ಸ್’ ನಲ್ಲಿ ದೇಶದಲ್ಲೇ ಬೆಂಗಳೂರಿಗೆ ಅಗ್ರಸ್ಥಾನ….

ನವದೆಹಲಿ,ಮಾರ್ಚ್,4,2021(www.justkannada.in):  ಈಸಿ ಆಫ್ ಲಿವಿಂಗ್ ಇಂಡೆಕ್ಸ್ ನಲ್ಲಿ(ಜೀವಿಸಲು ಉತ್ತಮ ನಗರಗಳ ಪಟ್ಟಿಯಲ್ಲಿ) ರಾಜ್ಯ ರಾಜಧಾನಿ ಬೆಂಗಳೂರು ದೇಶದಲ್ಲೇ ಅಗ್ರಸ್ಥಾನ ಗಳಿಸಿದೆ.jk

ಕೇಂದ್ರ ಸರ್ಕಾರ ಈಸಿ ಆಫ್ ಲಿವಿಂಗ್ ಇಂಡೆಕ್ಸ್ 2020 ನಡೆಸಿದ ಸಮೀಕ್ಷೆಯಲ್ಲಿ ಬೆಂಗಳೂರು ಅತ್ಯುತ್ತಮ ನಗರವಾಗಿ ಹೊರಹೊಮ್ಮಿದೆ. ಕೇಂದ್ರ ನಗರಾಭಿವೃದ್ಧಿ ಸಚಿವ ಹರಿದೀಪ್ ಸಿಂಗ್ ಈಸಿ ಆಫ್ ಲಿವಿಂಗ್ ಇಂಡೆಕ್ಸ್ ನ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಬೆಂಗಳೂರು ಪ್ರಥಮ, ಪುಣೆ ಎರಡನೇ ಸ್ಥಾನ ಪಡೆದರೆ, ಅಹಮದಾಬಾದ್ ಮೂರನೇ ಸ್ಥಾನದಲ್ಲಿದೆ.

bangalore-tops-country-easy-of-living-index
ಕೃಪೆ-internet

ಮಿಲಿಯನ್ ‌ಗಿಂತಲೂ ಹೆಚ್ಚು ಜನಸಂಖ್ಯೆಯ ವಿಭಾಗದಲ್ಲಿ ಬೆಂಗಳೂರು ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದು, ನಂತರದ ಸ್ಥಾನವನ್ನು ಪುಣೆ, ಅಹಮದಾಬಾದ್, ಚೆನ್ನೈ, ಸೂರತ್, ನವೀ ಮುಂಬೈ, ಕೊಯಮತ್ತೂರು, ವಡೋದರಾ, ಇಂದೋರ್ ಮತ್ತು ಗ್ರೇಟರ್ ಮುಂಬೈ,’ ಪಿಐಬಿ ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖ ಮಾಡಲಾಗಿದೆ.

Key words: Bangalore -tops – country – Easy of Living Index.