Sunday, August 23, 2026

BDA Apartments

Home Front Page TCS 10K ರನ್: ಬೆಂಗಳೂರಿನ ಖಾಲಿ ರಸ್ತೆಗಳಲ್ಲಿ ಓಡಿ ಸಂಭ್ರಮಿಸಿದ ರನ್ನರ್ಸ್

TCS 10K ರನ್: ಬೆಂಗಳೂರಿನ ಖಾಲಿ ರಸ್ತೆಗಳಲ್ಲಿ ಓಡಿ ಸಂಭ್ರಮಿಸಿದ ರನ್ನರ್ಸ್

ಬೆಂಗಳೂರು, ಮೇ 15, 2022 (www.justkannada.in):  ಇಂದು ಟಿಸಿಎಸ್ ಸಂಸ್ಥೆ ಕಂಠೀರವ ಸ್ಟುಡಿಯೋದಲ್ಲಿ ಆಯೋಜಿಸಿದ್ದ ವರ್ಲ್ಡ್ ಪ್ರೀಮಿಯರ್ 10 ಕೆ ರನ್ -ಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.

ಸಾವಿರಾರು ಮಂದಿ ಪಾಲ್ಗೊಂಡು ಬೆಂಗಳೂರಿನ ರಸ್ತೆಗಳಲ್ಲಿ ಓಡಿ ಸಂಭ‍್ರಮಿಸಿದರು.  10 ಕೆ ರನ್ ನಲ್ಲಿ 17 ಸಾವಿರಕ್ಕಿಂತ ಹೆಚ್ಚು ಜನ ಭಾಗವಹಿಸಿದ್ದರು.

ಹಿರಿಯರು, ವಿಕಲಚೇತನರು ತಮ್ಮ ಆರೋಗ್ಯ, ದೇಶಕ್ಕಾಗಿ ಹಾಗೂ ಜೀವನದ ಉತ್ಸಾಹಕ್ಕಾಗಿ ಓಡಿದರು. ಈ ವೇಳೇ ಮಾತನಾಡಿದ ಸಿಎಂ, ಸರ್ಕಾರೇತರ ಸಂಸ್ಥೆಗಳು ಈ ವೇದಿಕೆಯ ಮೂಲಕ ತಮ್ಮ ಸಾಮಾಜಿಕ ಕೆಲಸಕ್ಕೆ ದೇಣಿಗೆಯನ್ನು ಸಂಗ್ರಹಕ್ಕೆ ಅವಕಾಶ ಕಲ್ಪಿಸಿಕೊಟ್ಟು ಸಾಮಾಜಿಕ ಹೊಣೆಗಾರಿಕೆಯನ್ನು ಟಿ.ಸಿ.ಎಸ್ ಸಂಸ್ಥೆ ತೋರಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ, ಕ್ರೀಡೆ ಮತ್ತು ಯುವಜನ ಸಬಲೀಕರಣ ಸಚಿವ ಡಾ. ನಾರಾಯಣಗೌಡ ಮತ್ತಿತರರು ಉಪಸ್ಥಿತರಿದ್ದರು.