ಬೆಂಗಳೂರು, ಆಗಸ್ಟ್,19,2020(www.justkannada.in): ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಪೋರೇಟರ್ ಗಳಾದ ಸಂಪತ್ ರಾಜ್ ಮತ್ತು ಜಾಕೀರ್ ಹುಸೇನ್ ಅವರನ್ನು ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ಸೂಚನೆ ನೀಡಿದ್ದಾರೆ.
ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಮುಂಜಾನೆಯಿಂದ ಸಂಜೆವರೆಗೆ ಇಬ್ಬರು ಕಾರ್ಪೋರೇಟರ್ ಗಳನ್ನ ಸಿಸಿಬಿ ವಿಚಾರಣೆ ನಡೆಸಿತ್ತು. ಬಳಿಕ ಕಾರ್ಪೋರೇಟರ್ ಗಳ ಮೊಬೈಲ್ ಗಳನ್ನು ವಶಪಡಿಸಿಕೊಂಡು ಮೊದಲ ಹಂತದ ವಿಚಾರಣೆ ಮುಕ್ತಾಯಗೊಳಿಸಲಾಗಿತ್ತು.
ಇದೀಗ ಗುರುವಾರ(ನಾಳೆ) ಇಬ್ಬರು ಕಾರ್ಪೋರೇಟರ್ ಗಳಿಗೂ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ಸೂಚನೆ ನೀಡಿದ್ದಾರೆ.
Key words: Bangalore- riot case-Corporators -ordered – attend – hearing –again- tomorrow.






