ಬೆಂಗಳೂರು,ಮಾರ್ಚ್,31,2026 (www.justkannada.in): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಡ್ರಗ್ಸ್ ದಂಧೆ ವಿರುದ್ದ ಪೊಲೀಸರ ಕಾರ್ಯಚರಣೆ ಮುಂದುವರೆದಿದ್ದು ಇದೀಗ ಯಲಹಂಕ ಠಾಣಾ ಪೊಲೀಸರು, ಸುಮಾರು 2 ಕೋಟಿ ರೂ.ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿ ನೈಜೀರಿಯಾ ಮೂಲದ ಪ್ರಜೆಯನ್ನ ಬಂಧಿಸಿದ್ದಾರೆ.
ಮಾದಕ ವಸ್ತುಗಳ ಜಾಲದ ವಿರುದ್ಧ ಬೆಂಗಳೂರು ಪೊಲೀಸರು ತಮ್ಮ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು ಯಲಹಂಕ ಪೊಲೀಸರು 2 ಕೆಜಿ ಎಂಡಿಎಂಎ (MDMA) ಕ್ರಿಸ್ಟಲ್ಸ್ ಜಪ್ತಿ ಮಾಡಿ ನೈಜೀರಿಯಾ ಮೂಲದ ಪೆಡ್ಲರ್ ಸ್ಯಾಮುಯೆಲ್ ಇಕ್ಕೆನಾ ಎಂಬಾತನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿ ಸ್ಯಾಮುಯೆಲ್ ಇಕ್ಕೆನಾ 2012ರಲ್ಲಿ ಬಿಸಿನೆಸ್ ವೀಸಾದಡಿ ಭಾರತಕ್ಕೆ ಬಂದಿದ್ದ. ದೆಹಲಿ ಮತ್ತು ಮುಂಬೈನಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಈತ, ಕಳೆದ ವರ್ಷ ಬೆಂಗಳೂರಿಗೆ ಶಿಫ್ಟ್ ಆಗಿದ್ದ. ಬಟ್ಟೆ ವ್ಯಾಪಾರ ಮಾಡುವುದು ಕೇವಲ ನೆಪವಾಗಿದ್ದು, ಅದರ ಮರೆಯಲ್ಲಿ ಈತ ದೊಡ್ಡ ಮಟ್ಟದ ಡ್ರಗ್ ನೆಟ್ವರ್ಕ್ ನಡೆಸುತ್ತಿದ್ದ ಎನ್ನಲಾಗಿದೆ. ಬನ್ನೇರುಘಟ್ಟ ಬಳಿ ಕೇವಲ 50 ಸಾವಿರ ರೂ.ಗೆ ಡ್ರಗ್ಸ್ ಖರೀದಿಸಿ, ಅದನ್ನು ಗ್ರಾಹಕರಿಗೆ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
Key words: Bangalore, Police raid, Drugs, worth, Rs 2 crore, seized







