Wednesday, August 19, 2026

BDA Apartments

Home Front Page ಖಾಲಿ ಇರುವ 2.84 ಲಕ್ಷಕ್ಕೂ ಹೆಚ್ಚು ಹುದ್ದೆ ಭರ್ತಿ ಮಾಡದೆ ಯುವಜನತೆಗೆ ದ್ರೋಹ: ‘ಕೈ’ ಸರ್ಕಾರದ...

ಖಾಲಿ ಇರುವ 2.84 ಲಕ್ಷಕ್ಕೂ ಹೆಚ್ಚು ಹುದ್ದೆ ಭರ್ತಿ ಮಾಡದೆ ಯುವಜನತೆಗೆ ದ್ರೋಹ: ‘ಕೈ’ ಸರ್ಕಾರದ ವಿರುದ್ದ JDS ಕಿಡಿ

ಬೆಂಗಳೂರು,ಮಾರ್ಚ್,31,2026 (www.justkannada.in):  ರಾಜ್ಯದಲ್ಲಿ 2.84 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿ ಇದ್ದರೂ ಕಳೆದ ಮೂರು ವರ್ಷದಿಂದ ಸರಿಯಾಗಿ ನೇಮಕಾತಿ ಮಾಡದೇ ಒಳಮೀಸಲಾತಿ ನೆಪದಲ್ಲಿ ನೇಮಕಾತಿಗಳ ಆರಂಭಕ್ಕೆ  ವಿಳಂಬ ಧೋರಣೆ ತೋರುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಜೆಡಿಎಸ್ ಟ್ವಿಟ್ ಮೂಲಕ ಕಿಡಿಕಾರಿದೆ.

ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್, ಡಿಕೆ ಶಿವಕುಮಾರ್ ಅವರೇ, ಮೊದಲು ಕರ್ನಾಟಕದ ನಿರುದ್ಯೋಗಿ ಯುವಜನತೆಗೆ ಉದ್ಯೋಗ ಕೊಡಿಸುವ ಕೆಲಸವನ್ನು ಮಾಡಿ. ಚುನಾವಣೆಗೂ ಮುನ್ನ ನೀವು, ನೀಡಿರುವ ಆಶ್ವಾಸನೆಯನ್ನು ಇನ್ನೂ ರಾಜ್ಯದಲ್ಲಿ ಈಡೇರಿಸಿಲ್ಲ.

ಭ್ರಷ್ಟ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ  ಬಂದು 3 ವರ್ಷವಾದರೂ ಖಾಲಿ ಇರುವ 2.84 ಲಕ್ಷಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡದೆ ಕರ್ನಾಟಕದ ಯವಜನತೆಗೆ ದ್ರೋಹ ಬಗೆದಿದ್ದೀರಿ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.

ಧಾರವಾಡ ಹಾಗೂ ಕಲಬುರಗಿ ಸೇರಿದಂತೆ ಹಲವೆಡೆ ನೌಕರಿಗಾಗಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಯುವಜನತೆ ಬೀದಿಗಿಳಿದು ಹೋರಾಡುತ್ತಿದ್ದರೂ, ದಪ್ಪ ಚರ್ಮದ  ಸಿದ್ದರಾಮಯ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಸರ್ಕಾರಕ್ಕೆ ಜೆಡಿಎಸ್ ಚಾಟಿ ಬೀಸಿದೆ.

ಕೊಟ್ಟ ಮಾತಿನಂತೆ ಕನ್ನಡಿಗರಿಗೆ ಸರ್ಕಾರಿ ನೌಕರಿಯನ್ನು ನೀಡಲು ಪೂರ್ಣ ಪ್ರಮಾಣದಲ್ಲಿ ನೇಮಕಾತಿ ಆರಂಭಿಸಿ… ನಿಮ್ಮ ಚುನಾವಣಾ ಪೊಳ್ಳು ಭರವಸೆಗಳನ್ನು ನಿಲ್ಲಿಸಿ ಎಂದು ಜೆಡಿಎಸ್ ಆಗ್ರಹಿಸಿದೆ.

Key words: JDS, congress, government, 2.84 lakh, vacant posts