ಇಂದು ಬೆಂಗಳೂರು, ನಾಳೆ ಮೈಸೂರಿಗೆ ಭೇಟಿ : ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಡಾ.ಎಲ್.ಮುರುಗನ್

 

ಬೆಂಗಳೂರು, ಆ.28, 2021 : (www.justkannada.in news) ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ರಾಜ್ಯ ಸಚಿವ ಡಾ.ಎಲ್. ಮುರುಗನ್ ಅವರು ಎರಡು ದಿನಗಳ ಭೇಟಿಗಾಗಿ ಇಂದು ರಾಜ್ಯಕ್ಕೆ ಆಗಮನ.

ಇಂದು ಬೆಂಗಳೂರಿಗೆ ಆಗಮಿಸಿರುವ ಸಚಿವರು, ನಾಳೆ ಮೈಸೂರಿನಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.

ನಾಳೆ ಮಧ್ಯಾಹ್ನ, ಮೈಸೂರಿನಲ್ಲಿ,ಆಜಾ಼ದಿ ಕಾ ಅಮೃತ ಮಹೋತ್ಸವ, 75ನೇ ಸ್ವಾತಂತ್ರ್ಯ ವರ್ಷಾಚರಣೆ ಅಂಗವಾಗಿ ಕರ್ನಾಟಕ ಪ್ರಾದೇಶಿಕ ಜನಸಂಪರ್ಕ ವಿಭಾಗದ ಮೈಸೂರಿನ ಕ್ಷೇತ್ರ ಪ್ರಚಾರ ಕಾರ್ಯಾಲಯ ಆಯೋಜಿಸಿರುವ 3 ದಿನಗಳ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡುವರು. ನಂತರ ಮೈಸೂರು ಆಕಾಶವಾಣಿಯಲ್ಲಿ ಸಂಗೀತ ದಿಗ್ಗಜರ ಛಾಯಾಚಿತ್ರ ಗ್ಯಾಲರಿ- ನಾದಾಲಯಕ್ಕೆ ಭೇಟಿ ನೀಡುವರು.

ಇದಕ್ಕೂ ಮುನ್ನ ಬೆಳಗ್ಗೆ ಸಚಿವ ಡಾ.ಎಲ್ ಮುರುಗನ್ ಅವರು ಸುತ್ತೂರಿನ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಯವರ 106ನೇ ಜಯಂತ್ಯುತ್ಸವದಲ್ಲಿ ಪಾಲ್ಗೊಳ್ಳುವರು.
ನಂತರ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಜೆಎಸ್ಎಸ್ ರೇಡಿಯೋ-ಸಮುದಾಯ ಬಾನುಲಿ ಕೇಂದ್ರದ ಉದ್ಘಾಟನೆ ನೆರವೇರಿಸುವರು.

key words : bangalore-mysore-central-minister-murugan-mysore-visit