Monday, September 14, 2026

BDA Apartments

ಪೌರಕಾರ್ಮಿಕರಿಗೆ ಸಿಹಿ ಹಂಚಿದ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ BDA JK_Adv BDA Adv
Home Front Page ಪೌರಕಾರ್ಮಿಕರಿಗೆ ಸಿಹಿ ಹಂಚಿದ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ

ಪೌರಕಾರ್ಮಿಕರಿಗೆ ಸಿಹಿ ಹಂಚಿದ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ

ಬೆಂಗಳೂರು, ಆ.07, 2021 : (www.justkannada.in news) ರಾಜ್ಯದ ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಖಾತೆ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಇಂದು ಪೌರ ಕಾರ್ಮಿಕರಿಗೆ ಸಿಹಿ ವಿತರಿಸಿದರು.

ಅರಮನೆ ನಗರ ವಾರ್ಡ್‌ನ ಲೋ ಲೆವೆಲ್‌ ಪಾರ್ಕ್ ಬಳಿ ನಡೆದ ಈ ಕಾರ್ಯಕ್ರಮದಲ್ಲಿ, ಪೌರಕಾರ್ಮಿಕರ ಜತೆ ಸಂವಾದ ನಡೆಸಿದ ಸಚಿವರು, ಅವರ ಸಮಸ್ಯೆಗಳನ್ನು ಆಲಿಸಿದರಲ್ಲದೆ  ಎಲ್ಲರಿಗೂ ಸಿಹಿತಿಂಡಿ ತಿನಿಸು ವಿತರಿಸಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯಾವುದೇ ಕಠಿಣ ಸಂದರ್ಭದಲ್ಲೂ ಪೌರ ಕಾರ್ಮಿಕರು ಕೆಲಸ ಮಾಡುತ್ತಾರೆ. ಮಳೆ, ಬಿಸಲು, ಯಾವುದನ್ನೂ ಲೆಕ್ಕಿಸದೆ ಸಮರ್ಪಣಾ ಮನೋಭಾವದಿಂದ ಕರ್ತವ್ಯ ನಿರ್ವಹಿಸುತ್ತಾರೆ. ಕೋವಿಡ್‌ ಸಂಕಷ್ಟ ಕಾಲದಲ್ಲಿ ಇವರೆಲ್ಲರೂ ತಮ್ಮ ಜೀವ ಲೆಕ್ಕಿಸದೆ ಕೆಲಸ ಮಾಡಿದ್ದಾರೆಂದು ಹೇಳಿದರು.

ಈಗಾಗಲೇ ಮಲ್ಲೇಶ್ವರ ಕ್ಷೇತ್ರದಲ್ಲಿ ಎಲ್ಲ ಪೌರ ಕಾರ್ಮಿಕರಿಗೆ ವ್ಯಾಕ್ಸಿನೇಷನ್‌ ಆಗಿದೆ. ಅವರಿಗೆ ಸಕಾಲಕ್ಕೆ ಫುಡ್‌ ಕಿಟ್‌ಗಳನ್ನು ಒದಗಿಸಲಾಗಿದೆ. ಯಾವುದೇ ಸಮಸ್ಯೆ ಇದ್ದರೂ ಆದ್ಯತೆ ಮೇರೆಗೆ ನೆರವಿನ ಹಸ್ತ ಚಾಚಲಾಗುತ್ತಿದೆ ಎಂದು ಸಚಿವರು ಹೇಳಿದರು.

 

key words: bangalore-minister-ashwathnarayan-scavengers-sweet-distribution