Sunday, August 9, 2026

BDA Apartments

Home Front Page ಗಣೇಶೋತ್ಸವಕ್ಕೆ ಸರ್ಕಾರದ ಹಸಿರು ನಿಶಾನೆ, ಆದರೆ ಕಂಡಿಷನ್ಸ್ ಅಪ್ಲೈ…!

ಗಣೇಶೋತ್ಸವಕ್ಕೆ ಸರ್ಕಾರದ ಹಸಿರು ನಿಶಾನೆ, ಆದರೆ ಕಂಡಿಷನ್ಸ್ ಅಪ್ಲೈ…!

 

ಬೆಂಗಳೂರು, ಸೆ.05, 2021 : (www.justkannada.in news ) : ಕೋವಿಡ್ ಭೀತಿ ನಡುವೆಯೂ ರಾಜ್ಯ ಸರಕಾರ ಹಿಂದುಪರ ಸಂಘಟನೆಗಳ ಮನವಿಗೆ ಸಕರಾತ್ಮಕವಾಗಿ ಸ್ಪಂಧಿಸಿದ್ದು, ಐದು ದಿನಗಳ ಕಾಲ ಗಣೇಶೋತ್ಸವಕ್ಕೆ ಷರತ್ತು ಬದ್ಧ ಅನುಮತಿ ನೀಡಿದೆ.

ಈ ಸಂಬಂಧ ಇಂದು ನಡೆದ ತಜ್ಞರ ನೇತೃತ್ವದ ಸಭೆ ಬಳಿಕ ಸಚಿವ ಆರ್.ಅಶೋಕ್ ಮಾಧ್ಯಮಗಳಿಗೆ ನೀಡಿದ ಹೇಳಿಕೆ ಹೀಗಿದೆ…
ನಗರಗಳಲ್ಲಿ ವಾರ್ಡಿಗೊಂದು ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಹಳ್ಳಿಗೊಂದು ಗಣಪತಿ ಮೂರ್ತಿ ಪ್ರತಿಷ್ಫಾಪನೆಗೆ ಅನುಮತಿ. ಶಾಲಾ ಕಾಲೇಜುಗಳಲ್ಲಿ ಗಣಪತಿ ಕೂರಿಸುವಂತಿಲ್ಲ. ಸಾಂಸ್ಕೃತಿಕ, ಮನರಂಜನಾ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ. ಐವತ್ತು ಅಡಿ ವ್ಯಾಪ್ತಿಯ ಪೆಂಡಾಲ್ ಗೆ ಮಾತ್ರ ಅವಕಾಶ.

ಚಿತ್ರ ಕೃಪೆ : ಇಂಟರ್ ನೆಟ್

ಈ ಷರತ್ತು ಉಲ್ಲಂಘಿಸಿದರೆ ಕಠಿಣ ಕ್ರಮ..ಸರ್ಕಾರದ ಎಚ್ಚರಿಕೆ. ಕೇರಳದ ಗಡಿ ಪ್ರದೇಶದಲ್ಲಿ ಗಣೇಶೋತ್ಸವಕ್ಕೆ ನಿರ್ಬಂಧ. ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸೂಚನೆ. ಅನಮತಿ ಪಡೆದ ಸ್ಥಳಗಳಲ್ಲಿ ಮಾತ್ರ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ. ನಿಗದಿತ ಸ್ಥಳಗಳಲ್ಲೇ ವಿಸರ್ಜನೆ. ಕಡ್ಡಾಯವಾಗಿ ಮೆರವಣಿಗೆ ನಡೆಸುವಂತಿಲ್ಲ. ರಾತ್ರಿ ಒಂಭತ್ತು ಗಂಟೆಯ ನಂತರ ಯಾವುದೇ ಪೂಜೆ ಪುರಸ್ಕಾರ ಇಲ್ಲ. ಗಣೇಶೋತ್ಸವ ಸಂಘಟಕರು ಕಡ್ಡಾಯವಾಗಿ ಕೊರೊನಾ ಲಸಿಕೆ ಪಡೆದಿರಬೇಕು.

key words: Bangalore-Karnataka-Ganesha-festival-conditions-government.