ಪೈಲ್ವಾನ್ ಸಿನಿಮಾ ಪೈರಸಿ ಮಾಡಿದ್ದ ಆರೋಪಿ ಅರೆಸ್ಟ್….

ಬೆಂಗಳೂರು,ಸೆ,20,2019(www.justkannada.in):  ಇತ್ತೀಚೆಗೆ ಬಿಡುಗಡೆಯಾಗಿರುವ ನಟ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರವನ್ನ ಪೈರಸಿ ಮಾಡಿದ್ದ ಆರೋಪಿಯನ್ನ ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ರಾಕೇಶ್ ಎಲ್. @ ರಾಕೇಶ್ ವಿರಾಟ್(19) ಬಂಧಿತ ಆರೋಪಿ, ಬಂಧಿತ ಆರೋಪಿ ರಾಕೇಶ್  ನೆಲಮಂಗಲ ತಾಲ್ಲೂಕಿನ ಇಮಚೇನಹಳ್ಳಿ ಗ್ರಾಮದವನು.  ಬೆಂಗಳೂರು ನಗರದ ಸಿಸಿಬಿ ಘಟಕದ ಸೈಬರ್ ಕ್ರೈಂ ಪೊಲೀಸರು ದಿನಾಂಕ:  ನಿನ್ನೆ  ಸಂಜೆ ಸುಮಾರು 3.00 ಗಂಟೆ ಸಮಯದಲ್ಲಿ ನೆಲಮಂಗಲ ತಾಲ್ಲೂಕಿನ ಇಮಚೇನಹಳ್ಳ್ಳಿ ಗ್ರಾಮದಲ್ಲಿ  ಕಾರ್ಯಾಚರಣೆ ನಡಸಿ ಆರೋಪಿ ರಾಕೇಶ್ ನನ್ನ ಬಂಧಿಸಿದ್ದಾರೆ.

ಬಂಧಿತ ರಾಕೇಶ್ ಇತ್ತೀಚೆಗೆ ಬಿಡುಗಡೆಯಾದ ಪೈಲ್ವಾನ್ ಕನ್ನಡ ಚಲನಚಿತ್ರದ ಕಾಪಿರೈಟ್ ಮಾಲೀಕರ ಅನುಮತಿ ಪಡೆಯದೇ ಸಂಪೂರ್ಣ ಚಲನಚಿತ್ರ ವೀಕ್ಷಿಸುವ ಲಿಂಕ್ ಅನ್ನು ಸಾರ್ವಜನಿಕವಾಗಿ ತನ್ನ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡು ಇತರರಿಗೂ ಲಿಂಕ್ ಅನ್ನು ಕಳುಹಿಸಿದ್ದ.  ಇದೀಗ ಆತನನ್ನ ಬಂಧಿಸಿ ಆತನ  ಬಳಿ ಇದ್ದ  ಮೊಬೈಲ್ವೊಂದನ್ನು ವಶಪಡಿಸಿಕೊಳ್ಳುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿ Rakesh virat(Yuva)  ಎಂಬ ಹೆಸರಿನಲ್ಲಿ ಫೇಸ್ಬುಕ್ ಖಾತೆಯನ್ನು ಹೊಂದಿದ್ದು, ಚಲನಚಿತ್ರ ಬಿಡುಗಡೆಯಾದ ದಿನವೇ ಚಲನಚಿತ್ರವನ್ನು ಸಂಪೂರ್ಣವಾಗಿ ವೀಕ್ಷಿಸಬಹುದಾದ ಲಿಂಕ್ ಅನ್ನು ತನ್ನ ಫೇಸ್ಬುಕ್ ಖಾತೆಯಲ್ಲಿ ಅಳವಡಿಸಿಕೊಂಡು ಫೇಸ್ಬುಕ್ ಸ್ನೇಹಿತರು ವೀಕ್ಷಿಸುವ ಅವಕಾಶ ಕಲ್ಪಿಸಿಕೊಟ್ಟಿದ್ದ.  ತನ್ನ ಫೇಸ್ಬುಕ್ ಖಾತೆಯ ಸ್ಟೋರಿಯಲ್ಲಿ ಸ್ಕ್ರೀನ್ ಶಾಟ್ ವೊಂದನ್ನು ಅಳವಡಿಸಿಕೊಂಡಿದ್ದು, ಅದರಲ್ಲಿ ಚಲನಚಿತ್ರದ ಲಿಂಕ್ ಪಡೆಯಲು ಇಚ್ಛಿಸುವವರು ತನಗೆ ಇನ್ಬಾಕ್ಸ್ ಮಾಡುವಂತೆ ಪ್ರಕಟಿಸಿಕೊಂಡ ಬಗ್ಗೆ ನುಡಿದಿದ್ದಾನೆ.

ತನ್ನ ಫೇಸ್ಬುಕ್ ಖಾತೆಯಿಂದ ಫೇಸ್ಬುಕ್ ನ  ಇಬ್ಬರು ಸ್ನೇಹಿತರಿಗೂ ಕೂಡ ಚಲನಚಿತ್ರದ ಲಿಂಕ್ ಶೇರ್ ಮಾಡಿರುವುದು ಕಂಡುಬಂದಿದೆ. ದಿನಾಂಕ: 16.09.2019 ರಂದು ಪೈಲ್ವಾನ್ ಕನ್ನಡ ಚಲನಚಿತ್ರದ ನಿರ್ಮಾಪಕರು ಕಾಪಿ ರೈಟ್ ಮಾಲೀಕರ ಅನುಮತಿ ಪಡೆಯದೇ ಪೈಲ್ವಾನ್ ಕನ್ನಡ ಚಲನಚಿತ್ರದ ಲಿಂಕ್ ಗಳನ್ನು ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಪೋಸ್ಟ್ ಮಾಡಿಕೊಂಡು ಸಂಪೂರ್ಣ ಸಿನಿಮಾ ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಿ ಅಕ್ರಮ ನಷ್ಟ ಉಂಟುಮಾಡಿದ್ದಾರೆಎಂದು ಆರೋಪಿಯ ವಿರುದ್ಧ  ದೂರು ನೀಡಿದ್ದರರು. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

Key words: Bangalore-Arrest -accused -doing pailwan-cinema -piracy.