ಹೆಂಡ ಮಾರೋರೆಲ್ಲಾ ಕೊಲೆಗಡುಗರು ಅಂತಾರೆ: ಮದ್ಯಪಾನ ನಿಷೇಧ ಮಾಡಲಿ ನೋಡೋಣ-ಸಿಟಿ ರವಿಗೆ ಬಿ.ಕೆ ಹರಿಪ್ರಸಾದ್ ಸವಾಲು.

ಬೆಳಗಾವಿ,ಡಿಸೆಂಬರ್,26,2022(www.justkannada.in):  ಸಿ.ಟಿ ರವಿ ಹೆಂಡ ಮಾರೋರೆಲ್ಲಾ ಕೊಲೆಗಡುಗರು ಅಂತಾರೆ. ಗುಜರಾತ್ ಮಾದರಿಯಲ್ಲಿ ರಾಜ್ಯದಲ್ಲಿ ಮದ್ಯಪಾನ ನಿಷೇಧ ಮಾಡಲಿ ನೋಡೋಣ ಎಂದು  ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಸವಾಲು ಹಾಕಿದರು.

ಇಂದು ಮಾತನಾಡಿದ ಬಿ.ಕೆ ಹರಿಪ್ರಸಾದ್,  ಸಿಟಿ ರವಿ ಹೆಂಡ ಮಾರುವವರು ಕೊಲೆಗಡುಕರು ಎಂದು ಕಿಡಿಕಾರಿದ್ದಾರೆ. ಅಷ್ಟೇ ಅಲ್ಲ ಬಿಎಸ್‌ ವೈ ಇದ್ದಾಗ ಸಾರಾಯಿ ಬಂದ್ ಮಾಡಿಸಿದರು. ಇದರಿಂದ ಸಾವಿರಾರು ಜನ ಬೀದಿಪಾಲಾದರು. ಈಗ ಹೆಂಡದ ಮೇಲೆ ಕಣ್ಣಿದೆ. 24 ಸಾವಿರ ಕೋಟಿ ಆದಾಯ ಹೆಂಡದ ತೆರಿಗೆ ಮೂಲಕವೇ ಬರುತ್ತದೆ. ‌ಆ ಕಸುಬು ನಡೆಸುತ್ತಿರುವವರನ್ನ ಕೊಲೆಗಡುಕರು ಎಂದು ಹೇಳೋದು ಎಷ್ಟರ ಮಟ್ಟಿಗೆ ಸರಿ ಎಂದು ಕಿಡಿಕಾರಿದರು.

ಸಿಟಿ ರವಿ ಅವರಿಗೆ  ಅಮವಾಸ್ಯೆಯಂದು ಸಾರಾಯಿ, ಹೆಂಡ  ಸಿಕ್ಕಿರಲಿಲ್ಲ. ಅದಕ್ಕೆ ಕಳ್ಳಬಟ್ಟಿ ಕುಡಿದು ಮಾತಾಡಿದ್ದಾರೆ ಎಂದು ಲೇವಡಿ ಮಾಡಿದರು.

Key words: ban –alcohol-BK Hariprasad –challenges-CT Ravi.