ಕನ್ನಡದ ‘ಬಾಹುಬಲಿ’ಗೆ ಧ್ವನಿ ಸರಿ ಇಲ್ಲ ಎನ್ನುತ್ತಿರುವ ಪ್ರೇಕ್ಷಕರು !

ಬೆಂಗಳೂರು, ನವೆಂಬರ್ 14, 2020 (www.justkannada.in): ಕನ್ನಡದಲ್ಲಿ ದೊಡ್ಡ ಅಲೆ ಎಬ್ಬಿಸಿದ ಬಾಹುಬಲಿ ಚಿತ್ರ ಕನ್ನಡ ಡಬ್ ಆಗಿದೆ. ಇದರ ಅವತರಣಿಕೆಯನ್ನು ಕಲರ್ಸ್ ಕನ್ನಡ ವಾಹಿನಿ ಪ್ರಸಾರ ಮಾಡುತ್ತಿದೆ.

ಈ ದೀಪಾವಳಿಗೆ ಅಂದರೆ ನವಂಬರ್ 15 ರಂದು ಸಂಜೆ 4.30 ಕ್ಕೆ ಸಿನಿಮಾ ಪ್ರಸಾರವಾಗುತ್ತಿದೆ. ಆದರೆ ಕನ್ನಡ ಡಬ್ ಅವತರಣಿಕೆಯಲ್ಲಿ ನಾಯಕ ಪ್ರಭಾಸ್ ಗೆ ನೀಡಿದ ಧ‍್ವನಿ ಬಗ್ಗೆ ವೀಕ್ಷಕರು ಆಕ್ಷೇಪವೆತ್ತಿದ್ದಾರೆ.

ಈ ಧ್ವನಿ ಪ್ರಭಾಸ್ ಗೆ ಸೂಟ್ ಆಗ್ತಿಲ್ಲ ಎಂದು ಕೆಲವರು ಹೇಳಿದರೆ ಮತ್ತೆ ನಾನಾ ದೋಷಗಳನ್ನು ಬಿಚ್ಚಿಟ್ಟಿದ್ದಾರೆ! ರಾಜಮೌಳಿ ನಿರ್ದೇಶನದ ಬಾಹುಬಲಿ ಭಾಗ 1 ಸಿನಿಮಾ ಕನ್ನಡ ಕಿರುತೆರೆಯಲ್ಲಿ ಇದೇ ಮೊದಲ ಬಾರಿಗೆ ಪ್ರಸಾರವಾಗುತ್ತಿದೆ.