Sunday, September 20, 2026

BDA Apartments

ಬೆಳಗಾವಿಯಲ್ಲಿ ಸಹಜ ಸ್ಥಿತಿಗೆ ಮರಳಿದ ಜನಜೀವನ BDA JK_Adv BDA Adv
Home Front Page ಬೆಳಗಾವಿಯಲ್ಲಿ ಸಹಜ ಸ್ಥಿತಿಗೆ ಮರಳಿದ ಜನಜೀವನ

ಬೆಳಗಾವಿಯಲ್ಲಿ ಸಹಜ ಸ್ಥಿತಿಗೆ ಮರಳಿದ ಜನಜೀವನ

ಬೆಂಗಳೂರು, ಡಿಸೆಂಬರ್ 19, 2021 (www.justkannada.in): ಬೆಳಗಾವಿಯಲ್ಲಿ ಜನಜೀವನ ಇಂದು ‌ಸಹಜ ಸ್ಥಿತಿಗೆ ಮರಳಿದೆ. ಎಂದಿನಂತೆ ಸಹಜ ಜನಜೀವನ ಆರಂಭಗೊಂಡಿದೆ.

ಮಹಾನ್ ಪುರುಷರ ಪ್ರತಿಮೆಗಳಿಗೆ ಅವಮಾನ ಮಾಡಿ ಶಾಂತಿ ಕದಡುತ್ತಿದ್ದವರನ್ನು ಈಗಾಗಲೇ ಪೊಲೀಸರು ವಶಕ್ಕೆ‌ ಪಡೆದುಕೊಂಡಿದ್ದಾರೆ.

ನಗರದಲ್ಲಿ ಎಲ್ಲವೂ ಶಾಂತವಾಗಿದ್ದು, ಆತಂಕವಿಲ್ಲದೇ ಜನರು ಓಡಾಟ ನಡೆಸಿದ್ದಾರೆ. ವ್ಯಾಪಾರ-ವಹಿವಾಟು ಎಂದಿನಂತೆ ಶುರುವಾಗಿದೆ.

ನಗರದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುಂಜಾಗ್ರತಾ ಕ್ರಮ‌ ಕೈಗೊಂಡಿದ್ದಾರೆ.

ತೆ ಶ್ರೀರಾಮಸೇನೆ ಹಿಂದೂಸ್ಥಾನ ಅಧ್ಯಕ್ಷ ರಮಾಕಾಂತ ಕೊಂಡುಸ್ಕರ, ಎಂಇಎಸ್ ಮುಖಂಡ ಶುಭಂ ಶೇಳಕೆ‌ ಸೇರಿದಂತೆ 27 ಮಂದಿಯನ್ನು ಬಂಧಿಸಿ ಹಿಂಡಲಗಾ ಜೈಲಿಗೆ ರವಾನಿಸಲಾಗಿದೆ.