Tuesday, September 29, 2026

BDA Apartments

Home Front Page ಹೀಗೊಂದು ಬಾಹುಬಲಿ ಸಮೋಸ ಸವಾಲು: 30 ನಿಮಿಷಗಳಲ್ಲಿ ತಿಂದು ರೂ. 51 ಸಾವಿರ ಗೆಲ್ಲುವ ಅವಕಾಶ.

ಹೀಗೊಂದು ಬಾಹುಬಲಿ ಸಮೋಸ ಸವಾಲು: 30 ನಿಮಿಷಗಳಲ್ಲಿ ತಿಂದು ರೂ. 51 ಸಾವಿರ ಗೆಲ್ಲುವ ಅವಕಾಶ.

ಮೀರತ್, ಜುಲೈ,8, 2022(www.justkannada.in): ಸಮೋಸ ಬಹುತೇಕ ಎಲ್ಲರಿಗೂ, ಅದರಲ್ಲಿಯೂ ಭಾರತೀಯರಿಗೆ ಬಹಳ ಮೆಚ್ಚಿನ ಲಘು ಉಪಹಾರವಾಗಿದೆ. ಮೀರತ್‌ ನಲ್ಲಿ ಸಮೋಸಪ್ರಿಯರಿಗಾಗಿಯೇ ಒಂದು ದೊಡ್ಡ ಸವಾಲನ್ನು ಸೃಷ್ಟಿಸಿದ್ದು ಈ ಕುರಿತು ಎಲ್ಲೆಡೆ ಚರ್ಚೆಯಾಗುತ್ತಿದೆ.

ಉತ್ತರ ಪ್ರದೇಶದ ಮೀರತ್‌ ನ ಕುರ್ತಿ ಬಜಾರ್‌ ನ ಒಂದು ಮಿಠಾಯಿ ಅಂಗಡಿ ಮಾಲೀಕರು ಎಂಟು ಕೆಜಿ ತೂಕದ ಬೃಹತ್ ಸಮೋಸವನ್ನು ತಯಾರಿಸಿದ್ದು, ಇದನ್ನು ಕೇವಲ 30 ನಿಮಿಷಗಳಲ್ಲಿ ತಿಂದು ಮುಗಿಸುವ ಸವಾಲನ್ನು ಹಾಕಿದ್ದಾರೆ. ಈ ಸವಾಲಿನಲ್ಲಿ ಗೆಲ್ಲುವವರಿಗೆ ರೂ.51 ಸಾವಿರ  ನಗದು ಬಹುಮಾನ ನೀಡಲಾಗುತ್ತದೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅಂಗಡಿಯ ಮಾಲೀಕ ಶುಭಂ ಅವರು, “ಸಮೋಸ ಕುರಿತಂತೆ ದೊಡ್ಡ ಸುದ್ದಿಯೊಂದನ್ನು ಸೃಷ್ಟಿಸಲು ವಿಭಿನ್ನವಾಗಿ ಆಲೋಚಿಸುತ್ತಿದ್ದೆ. ಆಗ ‘ಬಾಹುಬಲಿ’ ಸಮೋಸವನ್ನು ತಯಾರಿಸಲು ನಿರ್ಧರಿಸಿದೆ. ಮೊದಲು ನಾಲ್ಕು ಕೆಜಿಗಳ ಸಮೋಸ ತಯಾರಿಸಿದೆವು, ನಂತರ ಎಂಟು ಕೆಜಿ ಸಮೋಸವನ್ನು ತಯಾರಿಸಿದೆವು,” ಎಂದರು.ಹೀಗೊಂದು ಬಾಹುಬಲಿ ಸಮೋಸ ಸವಾಲು samosa

ಈ ಎಂಟು ಕೆಜಿ ತೂಕದ ಸಮೋಸದ ಬೆಲೆ ರೂ.೧,೧೦೦ ಆಗಿದ್ದು, ಇದರಲ್ಲಿ ಆಲೂಗಡ್ಡೆ, ಬಟಾಣಿ, ದೇಶಿ ಚೀಸ್ ಮತ್ತು ಡ್ರೈಫ್ರೂಟ್ಸ್ ಇದೆಯಂತೆ. “ಈವರೆಗೂ ನನ್ನ ಈ ಸಮೋಸ ತಿನ್ನುವ ಸವಾಲನ್ನು ಯಾರೂ ಯಶಸ್ವಿಯಾಗಿ ಪೂರ್ಣಗೊಳಿಸಿಲ್ಲ. ಅನೇಕರು ಇದನ್ನು ಪ್ರಯತ್ನಿಸಿದ್ದಾರೆ, ಆದರೆ ಯಶಸ್ವಿಯಾಗಿಲ್ಲ. ಮುಂದೆ ೧೦ ಕೆಜಿ ತೂಕದ ಸಮೋಸ ಸವಾಲನ್ನು ತಯಾರಿಸಬೇಕೆಂದು ಆಲೋಚಿಸಿದ್ದೇನೆ,” ಎನ್ನುತ್ತಾರೆ ಶುಭಂ.

ಆದರೆ ಈ ಬಾಹುಬಲಿ ಸಮೋಸದಿಂದ ಈತನ ಅಂಗಡಿಗೆ ಬರಲು ಮರೆತ್ತಿದ್ದಂತಹ ಗ್ರಾಹಕರು ಪುನಃ ಹಿಂದಿರುಗುತ್ತಿದ್ದು, ಈಗ ಹಿಂದಿಗಿಂತಲೂ ಈತನ ಅಂಗಡಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ.

“ದೇಶದ ವಿವಿಧ ಭಾಗಗಳ ಆಹಾರ ಬ್ಲಾಗ್ಗರ್‌ ಗಳು ಈ ಬಾಹುಬಲಿ ಸಮೋಸ ನೋಡಲು ಆಗಮಿಸುತ್ತಿದ್ದು, ಈ ಕುರಿತು ಚಿತ್ರಗಳು ಹಾಗೂ ವೀಡಿಯೋಗಳನ್ನು ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ,” ಎಂದು ಶುಭಂ ವಿವರಿಸಿದ್ದಾರೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Baahubali-Samosa-Challenge-30 minutes -51 thousand -win.