ಯಡಿಯೂರಪ್ಪ ನವರ ಮೇಲೆ ಬಿಜೆಪಿ ಹೈ ಕಮಾಂಡ್ ಹಿಡಿತ ಸಾದಿಸಿತೇ..?

 

ಬೆಂಗಳೂರು, ಆ.04, 2021 : (www.justkannada.in news ) ಮಾಜಿ ಮುಖ್ಯಮಂತ್ರಿ, ಏಕಮೇವ ಪ್ರಶ್ನಾತೀತ ಲಿಂಗಾಯತ ನಾಯಕ ಎಂದರೆ ಅದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ.

ಯಡಿಯೂರಪ್ಪ ನವರಿಗೆ ಸಿಟ್ಟು ಸೆಡವು ಜಾಸ್ತಿ. ಯಾರಿಗೂ ಬಗ್ಗದ, ತಲೆ ತಗ್ಗಿಸುವ ಜಾಯಮಾನದ ವ್ಯಕ್ತಿ. ಇಷ್ಟೆಲ್ಲದರ ನಡುವೆ, ಯಡಿಯೂರಪ್ಪ ಓರ್ವ ಹೃದಯವಂತ. ಕಷ್ಟದಲ್ಲಿ ಇರುವವರಿಗೆ ಹಿಂದುಮುಂದು ನೋಡದೆ ಸಹಾಯ ಹಸ್ತ ಚಾಚುವ ಗುಣವಿರುವ ವ್ಯಕ್ತಿ. ಹಟಕ್ಕೆ ಬಿದ್ದರೆ ಯಾರಿಗೂ ಜಗ್ಗದ ಮನುಷ್ಯ.

2011 ರಲ್ಲಿ ಬಿಜೆಪಿ ಹೈ ಕಮಾಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದಾಗ, ಅಧಿಕಾರ ತ್ಯಜಿಸಿ, ನಂತರ ಬಿಜೆಪಿ ಗೆ ಗುಡ್ ಬೈ ಹೇಳಿ, ಕೆಜೆಪಿ ಪಕ್ಷ ಕಟ್ಟಿ, ಬಿಜೆಪಿ ಪಕ್ಷವನ್ನು ಸೋಲಿಸಿದ್ದು ಇತಿಹಾಸ.

ಬಳಿಕ ಬಿಜೆಪಿಗೆ ಮರಳಿ, ಅದನ್ನು ಮತ್ತೊಮ್ಮೆ ಅಧಿಕಾರಕ್ಕೆ ತಂದರೂ, ಬಿಜೆಪಿ ಪಕ್ಷ ಯಡಿಯೂರಪ್ಪ ರವರನ್ನು ಪೂರ್ಣಾವಧಿ ಗೆ ಅಧಿಕಾರದಲ್ಲಿರಲು ಬಿಡಲಿಲ್ಲಾ. ಎರಡು ವರ್ಷ ಅಧಿಕಾರ ನಡೆಸಿದ ಯಡಿಯೂರಪ್ಪ ರವರನ್ನು ಬಲವಂತವಾಗಿ ರಾಜೀನಾಮೆ ಕೊಡಿಸಿತು. ಈ ಬಾರಿ, ಆಕ್ರೋಶವನ್ನು ಕಣ್ಣೀರಧಾರೆ ರೂಪದಲ್ಲಿ ಹರಿಸಿ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಟ್ಟರು ಯಡಿಯೂರಪ್ಪ.

ಅವರ ಉತ್ತರಾಧಿಕಾರಿಯಾಗಿ ಬಸಬರಾಜ ಬೊಮ್ಮಾಯಿಯವರನ್ನು ನೇಮಿಸಿದಾಗ. ಆ ನೇಮಕ ನನ್ನ ಆಣತಿಯಂತೆ ನಡದಿದೆ ಎಂದೇ ಬಿಂಬಿಸಿಕೊಂಡರು ಯಡಿಯೂರಪ್ಪ. ವಿಪರ್ಯಾಸವೆಂದರೆ, ಬೊಮ್ಮಾಯಿಯವರ ಸಂಪುಟದಲ್ಲಿ ತಮ್ಮ ಪುತ್ರ ವಿಜಯೇಂದ್ರ ರವರಿಗೆ ಸಚಿವ ಸ್ಥಾನ ಕೊಡಿಸುವಲ್ಲಿ ಯಡಿಯೂರಪ್ಪ ಸೋತಿದ್ದಾರೆ ಎಂದೇ ಹೇಳಬಹುದು.

ಬಿಜೆಪಿ ಹೈ ಕಮಾಂಡ್ ಯಡಿಯೂರಪ್ಪ ನವರ ಬೇಡಿಕೆಗೆ ಮನ್ನಣೆ ನೀಡಿಲ್ಲಾ. ಮೂದಲ ಬಾರಿಗೆ ಯಡಿಯೂರಪ್ಪ ನವರನ್ನು ಬಿಜೆಪಿ ಹೈ ಕಮಾಂಡ್ ಮಣಿಸಿದೆ ಎಂದರೆ ತಪ್ಪಾಗಲಾರದು.

-ಎಂ.ಸಿದ್ದರಾಜು, ಹಿರಿಯ ಪತ್ರಕರ್ತರು, ಮಾಜಿ ಅಧ್ಯಕ್ಷರು, ಕರ್ನಾಟಕ ಮಾಧ್ಯಮ ಅಕಾಡೆಮಿ

 

key words : b.s.yadiyurappa-bjp-high-commond-controle-bsy